ಬಕ್ರೀದ್ ಹಿನ್ನೆಲೆ: ಕೆಲ ಸ್ಥಳಗಳಲ್ಲಿ ಪ್ರಾಣಿ ವಧೆ ನಿಷೇಧಿಸಿದ ಬಿಬಿಎಂಪಿ

Update: 2020-07-26 16:31 GMT

ಬೆಂಗಳೂರು, ಜು.26: ಬಕ್ರೀದ್ ಹಬ್ಬದ ಹಿನ್ನೆಲೆ ನಗರದ ಕೆಲ ಸ್ಥಳಗಳಲ್ಲಿ ಪ್ರಾಣಿ ವಧೆ, ಪ್ರಾಣಿ ಬಲಿ ಮಾಡುವುದನ್ನು ಬಿಬಿಎಂಪಿ ನಿಷೇಧಿಸಿದೆ.

ನಗರದ ರಸ್ತೆಗಳು, ಪಾದಚಾರಿ ಮಾರ್ಗಗಳು, ಆಸ್ಪತ್ರೆಯ ಆವರಣ, ಶಾಲೆ, ಕಾಲೇಜುಗಳ ಆವರಣ, ಆಟದ ಮೈದಾನ, ಮಸೀದಿಗಳ ಆವರಣ, ಉದ್ಯಾನವನಗಳು, ಸಾರ್ವಜನಿಕ ಪ್ರದೇಶದಲ್ಲಿ ಪ್ರಾಣಿ ವಧೆ, ಬಲಿ ನಿಷೇಧಿಸಲಾಗಿದೆ.

ಈ ಸ್ಥಳಗಳಲ್ಲಿ ನಿಯಮ ಉಲ್ಲಂಘಿಸಿ ಪ್ರಾಣಿ ವಧೆ ಮಾಡಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ. 6 ತಿಂಗಳ ಜೈಲು ಅಥವಾ ದಂಡ ಎರಡೂ ವಿಧಿಸಬಹುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್‍ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News