×
Ad

ಪಿಇಎಸ್‍ಎಸ್‍ಎಟಿ ಪರೀಕ್ಷೆ ಆ.1ರಿಂದ ಆರಂಭ

Update: 2020-07-26 23:13 IST

ಬೆಂಗಳೂರು, ಜು.26: ಪಿಇಎಸ್ ವಿಶ್ವವಿದ್ಯಾಲಯವು ಬಿಟೆಕ್ ಪ್ರವೇಶಕ್ಕಾಗಿ ನಡೆಸುವ ಅಭಿಕ್ಷಮತೆ ಪರೀಕ್ಷಾ(ಪಿಇಎಸ್‍ಎಸ್‍ಎಟಿ) ಪ್ರಕ್ರಿಯೆಗಳನ್ನು ಆ.1ರಿಂದ 20ರವರೆಗೆ ನಡೆಸಲಾಗುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಬೆಂಗಳೂರು, ಮುಂಬಯಿ, ಹೈದರಾಬಾದ್, ವಿಜಯವಾಡ, ದೆಹಲಿ ಸೇರಿದಂತೆ ದೇಶದ 35 ಕೇಂದ್ರಗಳಲ್ಲಿ ಆ.1ರಿಂದ ನಡೆಯಲಿದೆ. ಈ ಸಂಬಂಧ ಕೋವಿಡ್-19 ಸರಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ದೂ.080-26724781 ಹಾಗೂ ವೆಬ್‍ಸೈಟ್ www.pes.edu ಗೆ ಸಂಪರ್ಕಿಸಬಹುದೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News