ಕೆಸಿಎಫ್ ಅಬುಧಾಬಿ ಝೋನ್ ವತಿಯಿಂದ ರಕ್ತದಾನ ಶಿಬಿರ

Update: 2020-07-27 07:38 GMT

ಅಬುಧಾಬಿ: ಕೆಸಿಎಫ್ ಯುಎಇ ಬ್ಲಡ್ ಸೈಬೋ ಇದರ ಅಧೀನದಲ್ಲಿ 'ರಕ್ತದಾನ ಜೀವದಾನ' ಎಂಬ ಘೋಷವಾಕ್ಯದೊಂದಿಗೆ ಅಬುಧಾಬಿ ಕೆಸಿಎಫ್ ಝೋನ್ ವತಿಯಿಂದ ರಕ್ತದಾನ ಶಿಬಿರವು ಅಬುಧಾಬಿ ಖಾಲಿದಿಯ್ಯ ಮಾಲ್ ಸಮೀಪದ ಬ್ಲಡ್ ಬ್ಯಾಂಕ್ ಸೆಂಟರಿನಲ್ಲಿ ಇತ್ತೀಚೆಗೆ ನಡೆಯಿತು.

ರಕ್ತದಾನ ಶಿಬಿರದಲ್ಲಿ 130 ಸದಸ್ಯರು ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಐ.ಎನ್.ಸಿ ಫಿನಾಸ್ಸಿಯಲ್ ಕಂಟ್ರೋಲರ್ ಅಬ್ದುಲ್ ಹಮೀದ್ ಸಹದಿ, ಕೆಸಿಎಫ್ ಐ.ಎನ್.ಸಿ ಸಂಘಟನಾ ಕಾರ್ಯದರ್ಶಿ ಪಿ.ಎಂ.ಎಚ್ ಅಬ್ದುಲ್ ಹಮೀದ್ ಈಶ್ವರಮಂಗಲ, ಐ.ಸಿ.ಎಫ್ ಯುಎಇ ಕಾರ್ಯದರ್ಶಿ ಹಮೀದ್ ಪರಪ್ಪ, ಅರ್.ಎಸ್.ಸಿ ಅಬ್ದುಲ್ ಬಾರಿ, ಝೋನ್ ಅಧ್ಯಕ್ಷ ಹಸೈನಾರ್ ಅಮಾನಿ ಅಜ್ಜಾವರ, ಬ್ಲಡ್ ಸೈಬೋ ಉಸ್ತವಾರಿ ಅಬ್ದುಲ್ ನವಾಝ್ ಕೋಟೆಕಾರ್ ಹಾಗೂ ಝೋನ್, ಸೆಕ್ಟರ್, ಯೂನಿಟ್ ಮಟ್ಟದ ನಾಯಕರು ಉಪಸ್ಥರಿದ್ದರು.

ಕೆಸಿಎಫ್ ಯುಎಇಯಲ್ಲಿ ಅನಿವಾಸಿ ಪ್ರವಾಸಿಗರ ಅತೀ ದೊಡ್ಡ ಧಾರ್ಮಿಕ ಹಾಗು ಸಾಮಾಜಿಕ ಸಂಘಟನೆಯಾಗಿದ್ದು, ಅನಿವಾಸಿ ಕನ್ನಡಿಗರಿಗೆ ತನ್ನ ಐದು ವರ್ಷದಲ್ಲಿ ಸಾವಿರಾರು ರೀತಿಯ ಸಹಾಯ ಅಭಯ ಹಸ್ತವನ್ನು ನೀಡುತ್ತಿದೆ ಮತ್ತು ಕೋವಿಡ್-19 ಸಂದರ್ಭದಲ್ಲಿ ವೈರಸ್ಸಿಗೆ ತುತ್ತಾಗಿ, ಉದ್ಯೋಗ ಕಳೆದುಕೊಂಡ ನಿರೋದ್ಯೋಗಿಗಳಿಗೆ, ತಾಯಿನಾಡಿಗೆ ಪ್ರಯಾಣಿಸುವ ಪ್ರವಾಸಿಗಳಿಗೆ, ಕಳೆದ ರಮದಾನ್ ತಿಂಗಳಲ್ಲಿ ಸಂಕಷ್ಟಕ್ಕೀಡಾದ ನೂರಾರು ಪ್ರವಾಸಿಗಳಿಗೆ ಕೆಸಿಎಫ್ ಯುಎಇ ಹಲವಾರು ಸಾಂತ್ವನ ಯೋಜನೆಯ ಆಡಿಯಲ್ಲಿ ಆಹಾರ, ನೀರು, ಹಣ್ಣುಹಂಪಲು, ವಿಮಾನ ಯಾನದ ವ್ಯವಸ್ಥೆ, ರಮದಾನ್ ಕಿಟ್, ಕೋವಿಡ್ ಕಿಟ್ ಆಹಾರ ಸಾಮ್ರಾಗಿಗಳನ್ನು ನೀಡಿ ಸಹಕರಿಸಿದೆ. ಮುಂದಿನ ಬ್ಲಡ್ ಸೈಬೋ ಶಿಬಿರ ಅಕ್ಟೋಬರ್ 23 ರಂದು ನಡೆಯಲಿದೆ ಎಂದು ಕೆಸಿಎಫ್ ಅಬುಧಾಬಿ ಬ್ಲಡ್ ಸೈಬೋ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News