‘ಮೈಕ್ರೋಸಾಫ್ಟ್’ನಿಂದ ಸರಕಾರಕ್ಕೆ 3 ಆರ್.ಟಿ. ಪಿ.ಸಿ.ಆರ್. ಟಿ. ಪರೀಕ್ಷಾ ಯಂತ್ರ ಕೊಡುಗೆ

Update: 2020-07-28 09:16 GMT

ಬೆಂಗಳೂರು, ಜು.28: ಮೈಕ್ರೋಸಾಫ್ಟ್ ಕಂಪೆನಿಯ ವತಿಯಿಂದ ಇಂದು ಮೂರು ಆರ್.ಟಿ. ಪಿ.ಸಿ.ಆರ್. ಟಿ. ಪರೀಕ್ಷಾ ಯಂತ್ರಗಳನ್ನು ಕೊಡುಗೆ ನೀಡಲಾಯಿತು.

ಈ ಸಂಬಂಧ  ವರ್ಚುಯಲ್ ಸಭೆಯಲ್ಲಿ  ಭಾಗವಹಿಸಿ  ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಖಾಸಗಿ ಕಂಪೆನಿಗಳು ಕೋವಿಡ್-19ರ ವಿರುದ್ಧದ ಹೋರಾಟದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಿರುವುದು ಸ್ವಾಗತಾರ್ಹ ಎಂದರು.

ಕೋವಿಡ್-19 ಸಾಂಕ್ರಾಮಿಕವನ್ನು ನಿಯಂತ್ರಿಸಲು ಸಾರ್ವಜನಿಕರು ಸೇರಿದಂತೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು. 

ಸಭೆಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ, ಮೈಕ್ರೋಸಾಫ್ಟ್ ಕಂಪೆನಿಯ ಕಾರ್ಪೊರೇಟ್ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ  ರಾಜೀವ್ ಕುಮಾರ್, ಸಿಬ್ಬಂದಿ ಮುಖ್ಯಸ್ಥ ಸಂದೀಪ್ ಶ್ರೀವಾಸ್ತವ್, ಹಣಕಾಸು ವಿಭಾಗದ ನಿರ್ದೇಶಕ ಅಮರೇಶ್ ರಾಮಸ್ವಾಮಿ, ಅರವಿಂದ ಪ್ರಕಾಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News