ಆನ್‍ಲೈನ್ ಮೂಲಕ ವೇಶ್ಯಾವಾಟಿಕೆ: ದಂಪತಿ, ಹೋಟೆಲ್ ವ್ಯವಸ್ಥಾಪಕ ಸಿಸಿಬಿ ಬಲೆಗೆ

Update: 2020-07-28 12:44 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.28: ಆನ್‍ಲೈನ್ ಮೂಲಕ ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು, ದಂಪತಿ ಹಾಗೂ ಹೋಟೆಲ್ ವ್ಯವಸ್ಥಾಪಕನನ್ನು ಬಂಧಿಸಿದ್ದಾರೆ.

ಅರಕೆರೆಯ ಗೌರವ್ ರಾಜ್ ಕರದಂ, ಹೀನಾ ಸಿಂಗ್ ಸೋಲಂಕಿ ಬಂಧಿತ ದಂಪತಿಯಾಗಿದ್ದು, ಜೊತೆಗೆ ಹೋಟೆಲ್ ವ್ಯವಸ್ಥಾಪಕ ಅಣ್ಣಪ್ಪ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ.

ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನೇರುಘಟ್ಟ ಮುಖ್ಯರಸ್ತೆ ಅರಕೆರೆ ಎಂಬಲ್ಲಿರುವ ಖಾಸಗಿ ಹೋಟೆಲ್‍ನಲ್ಲಿ ಕಾನೂನುಬಾಹಿರವಾಗಿ ಹೊರರಾಜ್ಯಗಳಿಂದ ಹುಡುಗಿಯರನ್ನು ಕರೆಸಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇಬ್ಬರು ಹೊರ ರಾಜ್ಯದ ಮಹಿಳೆಯರನ್ನು ರಕ್ಷಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ದಾಳಿಯ ವೇಳೆ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಶೋಧ ನಡೆಸಲಾಗಿದೆ. ಆರೋಪಿ ದಂಪತಿಗಳು, ತಮ್ಮ ಮೊಬೈಲ್‍ನಲ್ಲಿಯೇ ಸಾಮಾಜಿಕ ಜಾಲತಾಣಗಳ ಮೂಲಕ ಗ್ರಾಹಕರನ್ನು ಸೆಳೆದು ಈ ದಂಧೆ ನಡೆಸುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News