×
Ad

ಕೆಎಎಸ್ ಅಧಿಕಾರಿ ಡಾ.ಅನುರಾಧ ವಿರುದ್ಧ ಪ್ರಕರಣ ದಾಖಲು

Update: 2020-07-28 23:12 IST

ಬೆಂಗಳುರು, ಜು.28: ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದ ಆರೋಪದ ಮೇಲೆ ಕೆಎಎಸ್ ಅಧಿಕಾರಿ ಡಾ.ಕೆ.ಎನ್.ಅನುರಾಧ ವಿರುದ್ಧ ಇಲ್ಲಿನ ಕೆಆರ್ ಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಐಎಡಿಬಿ ಎಡಿಸಿ ಆಗಿರುವ ಅನುರಾಧ ಅವರು ಜು.26ರಂದು ರವಿವಾರ ಲಾಕ್‍ಡೌನ್ ನಡುವೆಯೂ ಬೆಂಗಳೂರಿನಿಂದ ಕೆಆರ್ ಪುರಂ ಮಾರ್ಗವಾಗಿ ಖಾಸಗಿ ಕಾರನ್ನು ಅಜಾಗರೂಕವಾಗಿ ಚಾಲನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಅಷ್ಟೇ ಅಲ್ಲದೆ, ಅಂದು ಅನುರಾಧ ಅವರ ಕಾರು ಮೆಟ್ರೋ ಬ್ಯಾರಿಕೇಡ್‍ಗೆ ಗುದ್ದಿ ಜಖಂ ಆಗಿತ್ತು. ಅದೃಷ್ಟವಶಾತ್ ಅನುರಾಧ ಪ್ರಾಣಾಪಾಯದಿಂದ ಪಾರಾಗಿ, ಬಳಿಕ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಈ ಹಿನ್ನೆಲೆ ಕೆಆರ್ ಪುರಂ ಸಂಚಾರ ಪೊಲೀಸರು ಕಾರನ್ನು ವಶಕ್ಕೆ ಪಡೆದು, ಐಪಿಸಿ ಸೆಕ್ಷನ್ 279 ಹಾಗೂ 337ರ ಅಡಿ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News