ಕೊರೋನ, ಲಾಕ್‍ಡೌನ್ ಸಂಕಷ್ಟ: 125 ರೈಲ್ವೇ ಗುತ್ತಿಗೆ ನೌಕರರ ವಜಾ
Update: 2020-07-29 22:22 IST
ಬೆಂಗಳೂರು, ಜು.29: ಕೊರೋನ ಸೋಂಕಿನ ಹಾಗೂ ಲಾಕ್‍ಡೌನ್ ನೆಪವೊಡ್ಡಿ ಇಲ್ಲಿನ ನೈರುತ್ಯ ರೈಲ್ವೆ ಇಲಾಖೆಯಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 125 ಗುತ್ತಿಗೆ ನೌಕರನನ್ನು ರೈಲ್ವೇ ಇಲಾಖೆ ವಜಾ ಮಾಡಿದೆ ಎಂದು ವರದಿಯಾಗಿದೆ.
ಯಾವುದೇ ರೀತಿಯ ನೋಟಿಸ್ ಅಥವಾ ಮಾಹಿತಿ ನೀಡದೆ, ರೈಲ್ವೇ ಇಲಾಖೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಹಲವು ವರ್ಷಗಳಿಂದ ಇಲಾಖೆಯೊಂದಿಗೆ ಬೆರೆತು ಕೆಲಸ ನಿರ್ವಹಿಸಿದ್ದು, ಇದೀಗ ಕಷ್ಟ ಕಾಲದಲ್ಲಿ ನಮ್ಮ ಬದುಕು ಬೀದಿಗೆ ಬಂದಿದೆ ಎಂದು ಕೇಂದ್ರ ಸರಕಾರದ ವಿರುದ್ಧ ಗುತ್ತಿಗೆ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ: ರೈಲ್ವೇ ಇಲಾಖೆಯ ಗುತ್ತಿಗೆ ಕಾರ್ಮಿಕರನ್ನು ವಜಾಗೊಳಿಸಿರುವುದನ್ನು ವಿರೋಧಿಸಿ ಇಲ್ಲಿನ ಸಂಗೊಳ್ಳಿ ರಾಯಣ್ಣ ರೈಲ್ಲೇ ನಿಲ್ದಾಣದ ಬಳಿ ಗುತ್ತಿಗೆ ನೌಕರರು ಕೆಲ ಕಾಲ ಮೌನವಾಗಿ ಪ್ರತಿಭಟನೆ ನಡೆಸಿದರು.