ಬೆಂಗಳೂರು: ಜಿಂಕೆ ಕೊಂಬು ಮಾರಾಟಗಾರರ ಬಂಧನ

Update: 2020-07-31 08:53 GMT

ಬೆಂಗಳೂರು, ಜು.31: ಅಕ್ರಮವಾಗಿ ಜಿಂಕೆ ಕೊಂಬುಗಳನ್ನು ಇಟ್ಟುಕೊಂಡು ಮಾರಾಟ ಮಾಡಲು ತೊಡಗಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಆರೋಪಿಗಳಿಂದ ಎರಡು ಜಿಂಕೆ ಕೊಂಬು, 1 ಇನ್ನೋವಾ ಕಾರು, ಮೂರು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ  ತಾಲೂಕಿನ ಕೊಣಂದೂರು ಸಿ.ಕೆ.ರಸ್ತೆ ನಿವಾಸಿ ಸುಂದರೇಶ್ (30), ಬೆಂಗಳೂರಿನ ಮುತ್ಯಾಲನಗರ 2ನೆ ಕ್ರಾಸ್ ಮಂಜು (46) ಹಗೂ ಶಿವಮೊಗ್ಗದ ತೀರ್ಥಹಳ್ಳಿಯ ಅರಳಾಪುರದ ವದಲ  ಗ್ರಾಮದ ನಿವಾಸಿ ರಾಘವೇಂದ್ರ (23) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ಯಶವಂತಪುರ ಇಂಡಸ್ಟ್ರೀಸ್‌ ಸಬ್‌ ಆರ್ಬ್‌ನಲ್ಲಿರುವ ಇಆರ್‌ಐ ಎಲೆಕ್ಟ್ರಾನಿಕ್ ರಿಲೇಶ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಪಕ್ಕದ ರಸ್ತೆಯಲ್ಲಿ ಜಿಂಕೆಯ ಕೊಂಬುಗಳನ್ನು ಇಟ್ಟುಕೊಂಡು ನಿಂತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ವಿಶೇಷ ವಿಚಾರಣಾ ದಳದ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ  ಬಂಧಿಸಿದ್ದಾರೆ. ಈ‌ ಸಂಬಂಧ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ನಗರ ಅಪರಾಧ ವಿಭಾಗದ ಜಂಟಿ ಪೊಲೀಸ್ ಠಾಣೆಯ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News