ಪಠ್ಯದಿಂದ ಸಂವಿಧಾನದ ವಿಷಯಗಳು ಕೈಬಿಡದಂತೆ ಸಂವಿಧಾನ ಓದು ಅಭಿಯಾನ ಸಮಿತಿ ಆಗ್ರಹ

Update: 2020-08-01 19:01 GMT

ಬೆಂಗಳೂರು, ಆ.1: ಕೊರೋನ ನೆಪವನ್ನೊಡ್ಡಿ ಪಠ್ಯ ಪರಿಷ್ಕರಣೆ ವೇಳೆ ಯಾವ ಕಾರಣಕ್ಕೂ ಸಂವಿಧಾನದ ವಿಚಾರಗಳನ್ನು ಕೈಬಿಡಬಾರದು ಎಂದು ‘ಸಂವಿಧಾನ ಓದು ಅಭಿಯಾನ ಸಮಿತಿ’ ಒತ್ತಾಯಿಸಿದೆ.

ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಗೆ ಪತ್ರ ಬರೆದಿರುವ ಸಮಿತಿ, 'ವಿಷಯ ತಜ್ಞರ ಅಭಿಪ್ರಾಯ ಪಡೆದೇ ಪಠ್ಯ ಕಡಿತ ಮಾಡಬೇಕು. ಅಲ್ಲಿ ಪಾರದರ್ಶಕತೆ ಉಳಿಸಿಕೊಳ್ಳಬೇಕು' ಎಂದು ಮನವಿ ಮಾಡಿದೆ.

ಸ್ವಾತಂತ್ರ್ಯ ಹೋರಾಟಗಾರರಾದ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಹೈದರಾಲಿ, ಟಿಪ್ಪು ಸುಲ್ತಾನ್, ರಾಣಿ ಅಬ್ಬಕ್ಕ ಅವರಂತಹ ವೀರರ ಚರಿತ್ರೆ ಮಕ್ಕಳಿಗೆ ಸಿಗಬೇಕು. ಇಲ್ಲದಿದ್ದರೆ ದೇಶದ ನಿಜವಾದ ಚರಿತ್ರೆಯ ಅರಿವಿಲ್ಲದ ಸ್ಥಿತಿಯಲ್ಲಿ ನಮ್ಮ ಮುಂದಿನ ಜನಾಂಗ ರೂಪುಗೊಳ್ಳಲಿದೆ. ಹಾಗಾಗಿ, ಆ ಅಂಶಗಳನ್ನು ಮೊದಲಿನಂತೆಯೇ ಪಠ್ಯಗಳಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ವಿನಂತಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News