×
Ad

ಕಲಾವಿದರಿಗೆ ಧನಸಹಾಯ ಮುಂದುವರಿಸಲು ಮನವಿ

Update: 2020-08-02 20:51 IST

ಬೆಂಗಳೂರು, ಆ.2: ಕೋವಿಡ್ ಸಂಕಷ್ಟದಲ್ಲಿರುವ ಕಲಾವಿದರಿಗೆ ಧನಸಹಾಯವನ್ನು ಇನ್ನೂ ಆರು ತಿಂಗಳು ಮುಂದುವರಿಸಬೇಕು ಎಂದು ಸಮುದಾಯ ಕರ್ನಾಟಕ ಸಂಸ್ಥೆ ಒತ್ತಾಯಿಸಿದೆ.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪರನ್ನು ಸಮುದಾಯ ರಾಜ್ಯ ಸಮಿತಿ ಉಪಾಧ್ಯಕ್ಷ ಟಿ. ಸುರೇಂದ್ರರಾವ್, ಸಹ ಕಾರ್ಯದರ್ಶಿ ಜೆ.ಸಿ. ಶಶಿಧರ್, ಸದಸ್ಯ ಪುರುಷೋತ್ತಮ ಕಲಾಲಬಂಡಿ ಮತ್ತು ವೆಂಕಟೇಶ ಪ್ರಸಾದ್ ಒಳಗೊಂಡ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಕಷ್ಟದಲ್ಲಿರುವ ಕಲಾವಿದರಿಗೆ ನಿರ್ದಿಷ್ಟ ನಿಯಮಗಳ ಆಧಾರದಲ್ಲಿ 2 ಸಾವಿರದಷ್ಟು ಧನಸಹಾಯ ನೀಡಲಾಗಿದೆ. ಸಮುದಾಯದ ಮನವಿಯಂತೆ ಈ ಯೋಜನೆಯನ್ನು ಇನ್ನೂ ಆರು ತಿಂಗಳ ಅವಧಿಗೆ ವಿಸ್ತರಿಸಲು ಪ್ರಯತ್ನಿಸಲಾಗುವುದು ಎಂದು ರಂಗಪ್ಪ ತಿಳಿಸಿದ್ದಾರೆ. ಸಹಾಯಧನ ಸಿಗದಿದ್ದವರು ಗಮನಕ್ಕೆ ತಂದರೆ ಪರಿಶೀಲಿಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ ಎಂದು ಸಮುದಾಯದ ಪ್ರಧಾನ ಕಾರ್ಯದರ್ಶಿ ಎಸ್. ದೇವೇಂದ್ರಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಲ ಕಲಾವಿದರು ಮರಣ ಹೊಂದಿದ ಮೇಲೂ ಮಾಸಾಶನ ವಿತರಣೆಯಾಗುತ್ತಿದ್ದ ಕಾರಣ ಅದನ್ನು ತಡೆಯಲು ಎಲ್ಲಾ ಕಲಾವಿದರಿಗೂ ತಮ್ಮ ದಾಖಲೆ ಪತ್ರಗಳನ್ನು ಸಲ್ಲಿಸಬೇಕೆಂದು ತಿಳಿಸಲಾಗಿತ್ತು. ಮಾಸಾಶನಕ್ಕೆ ಅರ್ಹರಾದ ಕಲಾವಿದರು ಇ–ಮೇಲ್ ಅಥವಾ ವಾಟ್ಸ್ ಆಪ್ ಮೂಲಕವೂ ಸಲ್ಲಿಸಬಹುದೆಂದು ಮಾಹಿತಿ ನೀಡಿದ್ದಾರೆ ಎಂದು ಅವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News