ಬೆಂಗಳೂರು : ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದ 1.75 ಕೆಜಿ ಚಿನ್ನಾಭರಣ ಕಾಣೆ

Update: 2020-08-02 16:42 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.2: ಬ್ಯಾಂಕ್ ಲಾಕರ್‍ನಲ್ಲಿಟ್ಟಿದ್ದ ಸುಮಾರು 85 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಕಾಣೆಯಾಗಿರುವ ಘಟನೆ ಜಯನಗರ ವ್ಯಾಪ್ತಿಯ ಬ್ಯಾಂಕ್ ಆಫ್ ಬರೋಡಾದಲ್ಲಿ ನಡೆದಿದೆ.

ಉದ್ಯಮಿಯೊಬ್ಬರು ಬರೋಡಾ ಬ್ಯಾಂಕ್ ಲಾಕರ್‍ನಲ್ಲಿ 1.75 ಕೆಜಿ ಚಿನ್ನದ ಆಭರಣಗಳನ್ನು ಇಟ್ಟಿದ್ದರು. ಇತ್ತೀಚೆಗೆ ಅವರು ಬಂದು ನೋಡಿದಾಗ ಆಭರಣಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಜಯನಗರ ಠಾಣೆಯಲ್ಲಿ ಉದ್ಯಮಿ ದೂರು ನೀಡಿದ್ದು, ಪೊಲೀಸರು ಬ್ಯಾಂಕ್ ಮತ್ತು ಸುತ್ತಮುತ್ತ ರಸ್ತೆಗಳಲ್ಲಿರುವ ಸಿಸಿಟಿವಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಬ್ಯಾಂಕ್ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News