ಯುಎಸ್ ಓಪನ್‌ನಿಂದ ಹಿಂದೆ ಸರಿದ ನಿಕ್ ಕಿರ್ಗಿಯೊಸ್

Update: 2020-08-03 04:09 GMT

ಮೆಲ್ಬೋರ್ನ್: ಯು.ಎಸ್. ಓಪನ್‌ನಿಂದ ಹಿಂದೆ ಸರಿದಿರುವ ಆಸ್ಟ್ರೇಲಿಯಾದ ನಿಕ್ ಕಿರ್ಗಿ ಯೊಸ್ ಕೊರೋನ ವೈರಸ್ ಸಾಂಕ್ರಾಮಿಕ ರೋಗ ಇನ್ನೂ ಹತೋಟಿಗೆ ಬಾರದಿರುವ ಸಮಯದಲ್ಲಿ ಆರೋಗ್ಯ ಸಲಹೆಯನ್ನು ನಿರ್ಲಕ್ಷಿಸುವ ನಿರ್ಧಾರಗಳಿಗಾಗಿ ಅವರ ಕೆಲವು ಸಹವರ್ತಿ ವೃತ್ತಿಪರರನ್ನು ಮತ್ತೊಮ್ಮೆ ಟೀಕಿಸಿದ್ದಾರೆ.

 ಕಿರ್ಗಿಯೊಸ್ ತನ್ನ ದೇಶದ ಮಹಿಳೆಯರ ವಿಶ್ವ ನಂಬರ್ ಒನ್ ಆಶ್ ಬಾರ್ಟಿ ಅವರನ್ನು ಅನುಸರಿಸಿದ್ದಾರೆ. ಅವರು ಆಗಸ್ಟ್ 31- ಸೆಪ್ಟಂಬರ್13ರ ತನಕ ನಡೆಯುವ ಟೂರ್ನಮೆಂಟ್‌ನಿಂದ ಹಿಂದೆ ಸರಿದಿದ್ದಾರೆ. ‘‘ನಾನು ಈ ವರ್ಷ ಯು.ಎಸ್. ಓಪನ್‌ನಲ್ಲಿ ಆಡುವುದಿಲ್ಲ’’ ಎಂದು ಕಿರ್ಗಿ ಯೊಸ್ ರವಿವಾರ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಳಿಸಿರುವ ವೀಡಿಯೊದಲ್ಲಿ ತಿಳಿಸಿದ್ದಾರೆ.

‘‘ಕ್ರೀಡೆಯ ಶ್ರೇಷ್ಠ ರಂಗಗಳಲ್ಲಿ ಒಂದಾದ ಆರ್ಥರ್ ಆಶೆ ಕ್ರೀಡಾಂಗಣದಲ್ಲಿ ಆಡದಿರುವುದು ನನ್ನ ಮನಸ್ಸಿಗೆ ನೋವುಂಟು ಮಾಡುತ್ತದೆ’’ ಎಂದರು. ಟೆನಿಸ್ ಆಟಗಾರರೇ ನೀವು ಪರಸ್ಪರ ಹಿತದೃಷ್ಟಿಯಿಂದ ವರ್ತಿಸಬೇಕು ಮತ್ತು ಒಟ್ಟಿಗೆ ಕೆಲಸ ಮಾಡಬೇಕು ಎಂದುಕಿರ್ಗಿಯೊಸ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News