ದಕ್ಷಿಣ ಗುಜರಾತ್‌ನಲ್ಲಿ 3.3 ತೀವ್ರತೆಯ ಭೂಕಂಪ

Update: 2020-08-03 19:01 GMT

ಅಹ್ಮದಾಬಾದ್, ಆ. 4: ದಕ್ಷಿಣ ಗುಜರಾತ್‌ನ ವಿವಿಧ ಭಾಗಗಳಲ್ಲಿ ಸೋಮವಾರ ಸಂಜೆ 3.3 ತೀವ್ರತೆಯ ಭೂಕಂಪ ಸಂಭವಿಸಿದೆ. ಆದರೆ, ಯಾವುದೇ ಪ್ರಾಣ ಅಥವಾ ಸೊತ್ತು ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿಂದ 200 ಕಿ.ಮೀ. ದೂರದಲ್ಲಿರುವ ಭರೂಚಾ ಜಿಲ್ಲೆಯಲ್ಲಿ ಭೂಕಂಪ ಕೇಂದ್ರ ಬಿಂದು ಹೊಂದಿತ್ತು ಎಂದು ಅವರು ತಿಳಿಸಿದ್ದಾರೆ.

ಭರೂಚಾ ನಗರದ ಆಗ್ನೇಯದಲ್ಲಿ 7 ಕಿಲೋ ಮೀಟರ್ ದೂರದಲ್ಲಿ 3.3 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ಗಾಂಧಿ ನಗರ ಮೂಲದ ಭೂಕಂಪಶಾಸ್ತ್ರ ಸಂಶೋಧನ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಸಂಜೆ 5.19ಕ್ಕೆ ಲಘು ಭೂಕಂಪ ಸಂಭವಿಸಿತು. ಭೂಕಂಪದ ಅನುಭವವಾದ ಕೂಡಲೇ ಜನರು ಭೀತಿಯಿಂದ ತಮ್ಮ ಮನೆಯಿಂದ ಹೊರಗೆ ಓಡಿ ಬಂದರು. ಆದರೆ, ಈ ವಲಯದಲ್ಲಿ ಯಾವುದೇ ಪ್ರಾಣ ಅಥವಾ ಸೊತ್ತು ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಭರಚಾದ ಜಿಲ್ಲಾಧಿಕಾರಿ ಎಂ. ಮೋಡಿಯಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News