ಸಿಎಂ ಬಿಎಸ್‌ವೈ ಸಂಪರ್ಕದಲ್ಲಿದ್ದ 60 ಮಂದಿಯ ಕೊರೋನ ವರದಿ ನೆಗೆಟಿವ್

Update: 2020-08-04 15:18 GMT

ಬೆಂಗಳೂರು, ಆ.4: ಕೊರೋನ ಸೋಂಕಿತರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸಂಪರ್ಕದಲ್ಲಿದ್ದ ಸುಮಾರು 60 ಮಂದಿಯ ಕೊರೋನ ಪರೀಕ್ಷಾ ವರದಿಯಲ್ಲಿ ಎಲ್ಲರಿಗೂ ನೆಗೆಟಿವ್ ಬಂದಿದೆ ಎಂದು ಹೇಳಲಾಗುತ್ತಿದೆ.

ಮುಖ್ಯಮಂತ್ರಿಗೆ ಕೊರೋನ ಸೋಂಕು ತಗಲಿರುವುದು ದೃಢಪಡುತ್ತಿದ್ದಂತೆ ಅವರಿಗೆ ಆಸ್ಪತ್ರೆಗೆ ದಾಖಲಿಸಿ, ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಗೃಹ ಕಚೇರಿ ಕೃಷ್ಣಾ, ಸರಕಾರಿ ನಿವಾಸ ಕಾವೇರಿಯ ಸಿಬ್ಬಂದಿಗಳು ಹಾಗೂ ಕುಟುಂಬ ಸದಸ್ಯರನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿತ್ತು.

ಇದೀಗ ಎಲ್ಲ ವರದಿ ಆರೋಗ್ಯ ಇಲಾಖೆಯ ಅಧಿಕಾರಿಗಳ ಕೈಸೇರಿದ್ದು, ಎಲ್ಲರ ವರದಿಯಲ್ಲೂ ನೆಗೆಟಿವ್ ಬಂದಿದೆ. ಇದರಿಂದಾಗಿ, ಮುಖ್ಯಮಂತ್ರಿ ಸ್ವಲ್ಪ ನಿರಾಳರಾಗಿದ್ದಾರೆ. ಪ್ರಮುಖವಾಗಿ ಮುಖ್ಯಮಂತ್ರಿಯ ಮಾಧ್ಯಮ ಸಂಯೋಜನಾಧಿಕಾರಿ ಸುನೀಲ್, ವಿಶೇಷ ಕರ್ತವ್ಯಾಧಿಕಾರಿ ಡಿ.ಲೋಕೇಶ್ ಸೇರಿದಂತೆ 60 ಮಂದಿಯ ವರದಿ ನೆಗೆಟಿವ್ ಬಂದಿರುವುದಾಗಿ ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News