ಕೋವಿಡ್19: ಬೆಂಗಳೂರಿನಲ್ಲಿ ಸೋಂಕಿತರಿಗಿಂತ ಸಂಪರ್ಕಿತರ ಪಟ್ಟಿಯೇ ದೊಡ್ಡದು !

Update: 2020-08-04 17:19 GMT

ಬೆಂಗಳೂರು, ಆ.4 : ನಗರದಲ್ಲಿ ಕೊರೋನ ಸೋಂಕಿತರ ಪಟ್ಟಿ ಬೆಳೆಯುತ್ತಲೇ ಇದ್ದು, ಅದರ ನಡುವೆ ಸೋಂಕಿತರಿಗಿಂತ ಅವರ ಸಂಪರ್ಕದಲ್ಲಿ ಇರುವವರ ಸಂಖ್ಯೆ ಮೂರು ಪಟ್ಟು ದೊಡ್ಡದಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 60 ಸಾವಿರ ಗಡಿ ದಾಟಿದ್ದು, ಬಿಬಿಎಂಪಿ ಇದುವರೆಗೂ ಒಟ್ಟಾರೆ ಕ್ವಾರಂಟೈನ್ ಮಾಡಿದವರ ಸಂಖ್ಯೆ ಎರಡು ಲಕ್ಷ ದಾಟಿದೆ ಎಂದು ಅಂದಾಜಿಸಲಾಗಿದೆ.

ನಗರದಲ್ಲಿ ದಿನವೂ ಎರಡು ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇದುವರೆಗೂ ಪತ್ತೆಯಾದ ಸೋಂಕಿತರಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಜನರು ಗುಣಮುಖರಾಗಿದ್ದಾರೆ. ಒಂದು ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ.

ನಗರದಲ್ಲಿ ಈವರೆಗೆ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದ ಸುಮಾರು 2.60 ಲಕ್ಷಕ್ಕೂ ಅಧಿಕ ಮಂದಿಯನ್ನು ಬಿಬಿಎಂಪಿ ಪತ್ತೆ ಮಾಡಿ ಕ್ವಾರಂಟೈನ್‍ಗೆ ಒಳಪಡಿಸಿದೆ. ಈ ಪೈಕಿ 1.16 ಪ್ರಾಥಮಿಕ ಸಂಪರ್ಕಿತರು ಹಾಗೂ 1.44 ಮಂದಿ ದ್ವಿತೀಯ ಸಂಪರ್ಕಿತರಾಗಿದ್ದಾರೆ.

ಬೆಂಗಳೂರು ನಗರ ಕೇಂದ್ರ ಭಾಗದಲ್ಲಿರುವ ಮೂರು ವಲಯಗಳಾದ ದಕ್ಷಿಣ, ಪೂರ್ವ ಮತ್ತು ಪಶ್ಚಿಮ ವಲಯದಲ್ಲಿ ಅಧಿಕ ಸಂಖ್ಯೆಯ ಸೋಂಕಿತರು ಪತ್ತೆಯಾದ ಹಿನ್ನಲೆಯಲ್ಲಿ ಈ ಭಾಗದ ಸಂಪರ್ಕಿತರೇ ಅಧಿಕವಾಗಿದ್ದಾರೆ. ಅದರಲ್ಲೂ ದಕ್ಷಿಣ ವಲಯದಲ್ಲಿ ಒಟ್ಟು 89,333 ಸಂಪರ್ಕಿತರು, ಪೂರ್ವ ವಲಯದಲ್ಲಿ 52,265 ಸಂಪರ್ಕಿತರು, ಪಶ್ಚಿಮ ವಲಯದಲ್ಲಿ 51,834 ಸಂಪರ್ಕಿತರು, ಮಹದೇವಪುರದಲ್ಲಿ 15,633, ಬೊಮ್ಮನಹಳ್ಳಿಯಲ್ಲಿ 15,547, ದಾಸರಹಳ್ಳಿಯಲ್ಲಿ 14,695, ಯಲಹಂಕದಲ್ಲಿ 12,431 ಹಾಗೂ ಆರ್. ಆರ್.ನಗರ ವಲಯದಲ್ಲಿ 8,838 ಮಂದಿ ಸಂಪರ್ಕಿತರನ್ನು ಪತ್ತೆ ಮಾಡಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News