ಬೆಂಗಳೂರಿನಲ್ಲಿ ಗಗನಕ್ಕೇರಿದ ತರಕಾರಿಗಳ ಬೆಲೆ

Update: 2020-08-04 17:24 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.4: ನಗರದಲ್ಲಿ ತರಕಾರಿ ಮತ್ತು ಸೊಪ್ಪುಗಳ ಬೆಲೆಗಳು ಗಗನಕ್ಕೇರಿದ್ದು, ಜನ ಸಾಮಾನ್ಯರು ಕೊಳ್ಳಲು ಹಿಂದೇಟು ಹಾಕುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.

ಬಜ್ಜಿ ಮೆಣಸಿನಕಾಯಿ ದರ 100 ಕ್ಕೆ ಏರಿಕೆಯಾಗಿದ್ದರೆ, ಕ್ಯಾಪ್ಸಿಕಾಂ ದರ 85 ರೂ. ಗೆ ಏರಿದೆ. ಕೊತ್ತಂಬರಿ ಸೊಪ್ಪಿನ ದರ ಮತ್ತೆ ಏರಿಕೆಯಾಗಿದೆ. ಕೊತ್ತಂಬರಿ ಸೊಪ್ಪು ಕಳೆದ ಮೂರು ತಿಂಗಳ ಹಿಂದೆ ಬೆಳೆಯಿರಲಿಲ್ಲ, ಬೇಡಿಕೆ ಹೆಚ್ಚಾಗಿತ್ತು. ಎರಡು ತಿಂಗಳಿಗೂ ಹೆಚ್ಚು ಕಾಲ ಬೆಲೆ ಇಳಿಯಲೇ ಇಲ್ಲ. ನಂತರ ಸ್ವಲ್ಪ ಇಳಿಯಿತು. ಕಂತೆಗೆ 20 ರೂ. ಇತ್ತು ಇದೀಗ ಕಂತೆಗೆ 30 ರೂ. ಹಾಗೂ 45 ರೂ. ಇದ್ದ ಕೆ.ಜಿ. ಸೊಪ್ಪು 87 ರೂ.ಗೆ ತಲುಪಿದೆ. ಅದೇ ರೀತಿ ಇತರೆ ಸೊಪ್ಪುಗಳ ದರವೂ ಏರಿಕೆಯಾಗಿದೆ.

ಬಜ್ಜಿ ಮೆಣಸಿನಕಾಯಿ ಮತ್ತು ಕ್ಯಾಪ್ಸಿಕಂ ಬೆಳೆ ಮಳೆಗೆ ಹಾಳಾಗಿದ್ದು, ಉತ್ಪಾದನೆ ಕುಂಠಿತಗೊಂಡಿದೆ. ಚಿಕ್ಕಬಳ್ಳಾಪುರ, ಕೋಲಾರ, ಆನೇಕಲ್, ತುಮಕೂರು ಮತ್ತಿತರ ಭಾಗಗಳಿಂದ ಮೆಣಸಿನಕಾಯಿ ಬರುತ್ತಿತ್ತು. ಈಗ ಕಡಿಮೆಯಾಗಿದೆ.

ಜತೆಗೆ ಚಳಿಯ ವಾತಾವರಣವಿರುವುದರಿಂದ ಬಜ್ಜಿ, ಬೋಂಡಕ್ಕೆ ಸಹಜವಾಗಿಯೇ ಬೇಡಿಕೆಯಿದೆ. ಈ ಕಾರಣದಿಂದಾಗಿ ಬಜ್ಜಿ ಮೆಣಸಿನಕಾಯಿ, ಕ್ಯಾಪ್ಸಿಕಂ ದರ ಹೆಚ್ಚಾಗಿದೆ ಎಂದು ಹಾಪ್ ಕಾಮ್ಸ್ ಸಿಬ್ಬಂದಿ ಹೇಳಿದ್ದಾರೆ. ಉಳಿದಂತೆ ಬೀನ್ಸ್, ಟೊಮೇಟೊ, ಮೂಲಂಗಿ ದರ ಸಾಧಾರಣವಾಗಿದೆ.

ಹಾಪ್ ಕಾಮ್ಸ್ ನಲ್ಲಿ ಹಣ್ಣು, ತರಕಾರಿ ದರ

ಮೆಂತ್ಯ ಸೊಪ್ಪು 87 ರೂ. (ಕೆಜಿಗೆ)

ಪುದೀನ ಸೊಪ್ಪು64 ರೂ.

ಅಡುಗೆ ಬಾಳೆ 54 ರೂ.

ಪಾಲಕ್ ಸೊಪ್ಪು 52 ರೂ.

ತೊಂಡೆಕಾಯಿ 21 ರೂ.

ಟೊಮೇಟೊ 22 ರೂ.

ಬೀನ್ಸ್ 44 ರೂ.

ಮೂಲಂಗಿ 28 ರೂ.

ನುಗ್ಗೆಕಾಯಿ 76 ರೂ.

ಹಸಿಶುಂಠಿ 100 ರೂ.

ಬೀಟ್ ರೂಟ್ 24 ರೂ.

ಹಾಗಲಕಾಯಿ 46 ರೂ.

ಏಲಕ್ಕಿ ಬಾಳೆ 64 ರೂ.

ಪಚ್ಚಬಾಳೆ 20 ರೂ.

ದಾಳಿಂಬೆ ಬಾಗ್ವ 120 ರೂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News