ಖಾಸಗಿ ಚಿತ್ರಗಳು ವೈರಲ್ ಮಾಡುವುದಾಗಿ ಬೆದರಿಕೆ ಆರೋಪ: ಮಹಿಳೆಯಿಂದ ದೂರು

Update: 2020-08-04 17:44 GMT

ಬೆಂಗಳೂರು, ಆ.4: ಮಹಿಳೆಯ ಖಾಸಗಿ ಕ್ಷಣದ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸಂತ್ರಸ್ತೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಂತ್ರಸ್ತೆ ಮದುವೆಯಾಗಿದ್ದು, ಪತಿ ಜತೆ ಜರ್ಮನಿಯಲ್ಲಿದ್ದರು. ಇದೇ ವೇಳೆ ಹರಿಯಾಣ ಮೂಲದ ನಿತೇಶ್ ಫೇಸ್‍ಬುಕ್ ಮುಖಾಂತರ ಪರಿಚಯವಾಗಿದ್ದ. ಇಬ್ಬರ ನಡುವೆ ಸ್ನೇಹ ಬೆಳೆದು ಬೆಂಗಳೂರಿಗೆ ಬಂದಾಗ ಇಬ್ಬರು ಹೋಟೆಲ್‍ವೊಂದರಲ್ಲಿ ಭೇಟಿಯಾಗಿದ್ದರು. ಈ ವೇಳೆ ಸಂತ್ರಸ್ತೆ ಜತೆ ನಿತೇಶ್ ಸಲುಗೆಯಿಂದ ಆಕೆಗೆ ಗೊತ್ತಾಗದ ಹಾಗೆ ಫೋಟೊ, ವಿಡಿಯೊ ಸೆರೆಹಿಡಿದಿದ್ದ. ಈ ವಿಚಾರ ಮಹಿಳೆಗೆ ಗೊತ್ತಾಗಿ ಆತನಿಂದ ದೂರ ಉಳಿದಿದ್ದರು.

ಕಳೆದ ತಿಂಗಳು ಮಹಿಳೆಯು ಎನ್.ಆರ್. ಕಾಲನಿಯಲ್ಲಿರುವ ತನ್ನ ತಂದೆಯ ಮನೆಯಲ್ಲಿರುವಾಗ ನಿತೇಶ್ ಸಂತ್ರಸ್ತೆಯ ತಂದೆಗೆ ಕರೆ ಮಾಡಿ ಅವಹೇಳನಕಾರಿಯಾಗಿ ಮಾತಾಡಿದ್ದ. ಆಕೆ ತನ್ನ ಜತೆ ಸಂಬಂಧ ಮುಂದುವರೆಸಬೇಕು. ಇಲ್ಲದಿದ್ದರೆ ಖಾಸಗಿ ಫೋಟೊಗಳನ್ನು ವೈರಲ್ ಮಾಡುವುದಾಗಿ ಫೋನ್ ಮಾಡಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News