ವೃದ್ಧಾಶ್ರಮದಲ್ಲಿರುವ ಹಿರಿಯ ನಾಗರಿಕರಿಗೆ ಪಿಪಿಇ, ಮಾಸ್ಕ್ ಪೂರೈಸಿ: ಸುಪ್ರೀಂ ಕೋರ್ಟ್

Update: 2020-08-04 17:47 GMT

ಹೊಸದಿಲ್ಲಿ, ಅ. 4: ಕೊರೋನ ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಸಕಾಲದಲ್ಲಿ ಪಿಂಚಣಿ ವಿತರಿಸಬೇಕು ಹಾಗೂ ದೇಶಾದ್ಯಂತದ ವೃದ್ಧಾಶ್ರಮದಲ್ಲಿ ಇರುವ ಹಿರಿಯ ನಾಗರಿಕರಿಗೆ ಪಿಪಿಇ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.

ಹಿರಿಯ ನಾಗರಿಕರು ತೊಂದರೆಗೊಳಗಾಗುತ್ತಿದ್ದಾರೆ. ಅವರ ಯಾವುದೇ ಮನವಿಗೆ ಆಡಳಿತ ಸ್ಪಂದಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಕೊರೋನ ಸಾಂಕ್ರಾಮಿಕ ರೋಗ ಹರಡುತ್ತಿರುವ ಈ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಸಕಾಲದಲ್ಲಿ ಪಿಂಚಣಿ ತಲಪುವುದು ಅತ್ಯಗತ್ಯ ಎಂದು ಹಿರಿಯ ನ್ಯಾಯವಾದಿ ಅಶ್ವನಿ ಕುಮಾರ್ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠ ವಿಚಾರಣೆ ನಡೆಸಿತು.

ಕೋಟ್ಯಂತರ ಹಿರಿಯ ನಾಗರಿಕರು ಏಕಾಂಗಿಯಾಗಿ ಜೀವಿಸುತ್ತಿದ್ದಾರೆ. ಈಗಾಗಲೇ ಗುರುತಿಸಲಾದ ಹಾಗೂ ಪಿಂಚಣಿಗೆ ಅರ್ಹರಾದ ಹಿರಿಯ ನಾಗರಿಕರಿಗೆ ಸಕಾಲದಲ್ಲಿ ಪಿಂಚಣಿ ತಲುಪುವಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅಶ್ವನಿ ಕುಮಾರ್ ಅವರು ನ್ಯಾಯಾಲಯಕ್ಕೆ ತಿಳಿಸಿದರು. ಸರಕಾರದ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ವಿ. ಮೋಹನ್, ಇದಕ್ಕೆ ಸಂಬಂಧಿಸಿ ರಾಜ್ಯಗಳು ಶ್ರಮಿಸುತ್ತಿವೆ. ಇದು ವಿರೋಧಿಸುವ ವಿಷಯ ಅಲ್ಲ ಎಂದು ಹೇಳಿದರು.

ಮನವಿಗೆ ಪ್ರತಿಕ್ರೆಯ ಸಲ್ಲಿಸಲು ಒಂದು ವಾರಗಳ ಕಾಲಾವಕಾಶ ನೀಡುವಂತೆ ಮೋಹನ ಅವರು ಮನವಿ ಮಾಡಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅಶ್ವನಿ ಕುಮಾರ್, ಈ ವಿಷಯದ ಕುರಿತಂತೆ ತುರ್ತು ಕ್ರಮ ಕೈಗೊಳ್ಳಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News