ಬೆಂಗಳೂರು: ಸಾರಿಗೆ ಸಂಜೀವಿನಿ ಆಂಬ್ಯುಲೆನ್ಸ್ ಚಾಲನೆ

Update: 2020-08-05 16:34 GMT

ಬೆಂಗಳೂರು, ಆ. 5: ಕೆಎಸ್ಸಾರ್ಟಿಸಿ ಪ್ರಾದೇಶಿಕ ಕಾರ್ಯಾಗಾರ, ಬೆಂಗಳೂರಿನಲ್ಲಿ ಆಂತರಿಕವಾಗಿ ಲಭ್ಯವಿರುವ ವಸ್ತುಗಳಲ್ಲಿ ಮಿನಿ ಬಸ್ಸನ್ನು ಆಂಬ್ಯುಲೆನ್ಸ್ ಆಗಿ ನಿರ್ಮಿಸಲಾಗಿದ್ದು, ವೆಚ್ಚ ಸುಮಾರು 2.5 ಲಕ್ಷ ರೂ.ಗಳಾಗಿದೆ.

ತುರ್ತು ಸ್ಥಳದಿಂದ ಆಂಬ್ಯುಲೆನ್ಸ್ ರೋಗಿಯನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ವರ್ಗಾಹಿಸಲು ಮತ್ತು ಆಸ್ವತ್ರೆಯನ್ನು ತಲುಪಿದ ನಂತರ ತುರ್ತು ಕೋಣಿಗೆ ರೋಗಿಯನ್ನು ತ್ವರಿತವಾಗಿ ಮತ್ತು ಆರಾಮದಾಯಕವಾಗಿ ವರ್ಗಾಹಿಸಲು ಅನುಕೂಲವಾಗುವಂತೆ 2 ಸ್ಟ್ರೆಚರ್‍ಗಳನ್ನು ಹೊಂದಿದ ಆಂಬ್ಯುಲೆನ್ಸ್ ಇದೆ.

ಬ್ಯಾಂಡೇಜ್, ಕ್ರಿಮಿನಾಶಕ, ಗಾಜ್ಡ್ರೆಸ್ಸಿಂಗ್, ಪ್ಲಾಸ್ಟರ್, ಕ್ರೆಪ್ಬ್ಯಾಂಡೇಜ್, ಡ್ರೆಸಿಂಗ್, ಕೈ ಗವಸುಗಳು, ಕತ್ತರಿ ಮತ್ತು ಚಿಮುಟಗಳು, ಮತ್ತು ಸೋಂಕು ನಿವಾರಕ ಪರಿಹಾರಗಳನ್ನು ಒಳಗೊಂಡಿರುವ ಪ್ರಥಮ ಚಿಕಿತ್ಸಾ ಕಿಟ್‍ಗಳನ್ನು ಹೊಂದಿರುವ ಆಂಬ್ಯುಲೆನ್ಸ್‍ನಲ್ಲಿ ಆಕ್ಸಿಜನ್, ಶುದ್ದವಾದ ಆಮ್ಲಜನಕವನ್ನು ಕೃತಕವಾಗಿ ಒದಗಿಸುವ ಮೂಲಕ ರೋಗಿಯ ಜೀವವನ್ನು ಉಳಿಸಲು ಸಹಾಯ ಮಾಡುವ ಒಂದು ಆಮ್ಲಜನಕ ಸಿಲಿಂಡರನ್ನು ಇರಿಸಲಾಗಿದೆ.

ಸಂಪೂರ್ಣ ಕ್ರಿಯಾತ್ಮಕ ಮತ್ತು ತುಂಬಿದ 1 ಕೆಜಿ ಅಗ್ನಿಶಾಮಕ ಯಂತ್ರವನ್ನು ಆಂಬ್ಯುಲೆನ್ಸ್‍ನಲ್ಲಿ ಇರಿಸಲಾಗಿದೆ. ಕೈ ತೊಳೆಯಲು ಸಲೂನ್‍ನೊಳಗೆ 20 ಲೀಟರ್‍ನ ನೀರಿನ ಟ್ಯಾಂಕ್, ಮತ್ತೊಂದು ಟ್ಯಾಂಕ್ ನೀರು ಸಂಗ್ರಹಿಸಲು ಒದಗಿಸಲಾಗಿದೆ. ಕೈ ತೊಳೆದು ನೀರನ್ನು ಸಂಗ್ರಹಿಸಲು ಪ್ರತ್ಯೇಕ ಪ್ಲಾಸ್ಟಿಕ್ ಟ್ಯಾಂಕ್ ಒದಗಿಸಲಾಗಿದೆ. ಡ್ರೈವರ್‍ಗೆ ಸುಲಭವಾದ ಪ್ರತ್ಯೇಕ ಚಾಲಕ ವಿಭಾಗವನ್ನು ಒದಗಿಸಲಾಗಿದೆ. ಸಿಸಿ ಕ್ಯಾಮೆರಾ ಒದಗಿಸಲಾಗಿದೆ. ಕೆಂಪು ಆಂಬ್ಯುಲೆನ್ಸ್‍ನ ಮುಂಭಾಗದ ಮೇಲ್ಬಾಗದಲ್ಲಿ ಕೆಂಪು ಮತ್ತು ನೀಲಿ ಬಣ್ಣ ಸೂಚಕ ಬೆಳಕನ್ನು ಮತ್ತು ಸೈರನ್ ಆಂಬ್ಯುಲೆನ್ಸ್ ನಲ್ಲಿ ಜೋಡಿಸಲಾಗಿದೆ.

ಒಟ್ಟು 5 ಸಂಖ್ಯೆ 2 ಆಸನಗಳ ಪ್ರಯಾಣಿಕರ ಆಸನ ಚೌಕಟ್ಟುಗಳನ್ನು ಸಲೂನ್ ಒಳಗೆ ಒದಗಿಸಲಾಗಿದೆ. (ಚಾಲಕರ ಕ್ಯಾಬಿನ್ ಜೋಡನೆಗೆ ಎದುರಾಗಿರುವ ಸ್ಟ್ರೀಟ್ ಲೈಟ್‍ಗೆ 3 ಸಂಖ್ಯೆ ಮತ್ತು ರೋಗಿಗಳ ಹತ್ತಿರ ವಿರುವ ವಿರುದ್ದ ದಿಕ್ಕಿನಲ್ಲಿ 1 ಸಂಖ್ಯೆ ನೀಲಿ ಬಣ್ಣದ ಕಿಟಕಿ ಪರದೆಗಳನ್ನು ಎರಡೂ ಕಡೆ ಒದಗಿಸಲಾಗಿದೆ. 4 ಫ್ಯಾನ್‍ಗಳನ್ನು ಅಳವಡಿಸಲಾಗಿದೆ. ಕೈಗಳ ಸ್ಪರ್ಶವಿಲ್ಲದ ಸ್ಯಾನಿಟೈನರ್ ಅನ್ನು ಒಳಗೆ ಅಳವಡಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News