ಐಎಂಎ ಹಗರಣ: ಚರ ಸ್ವತ್ತು ಹರಾಜು

Update: 2020-08-05 16:35 GMT

ಬೆಂಗಳೂರು, ಆ. 5: ಬೆಂಗಳೂರು ದಕ್ಷಿಣ ತಾಲೂಕಿನ ವಿಶೇಷ ತಹಸಿಲ್ದಾರ್ ಅವರು `ಐ ಮಾನಿಟರಿ ಅಡ್ವೈಸರಿ' (ಐಎಂಎ) ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ಅಧಿನಿಯಮ 2004 ಅಡಿಯಲ್ಲಿ ಚರಸ್ವತ್ತುಗಳನ್ನು ಹರಾಜು ಮಾಡಲು ಪ್ರಕಟಣೆ ಹೊರಡಿಸಿದ್ದಾರೆ.  

ಫ್ರಂಟ್‍ಲೈನ್ ಫಾರ್ಮಸಿ ಯುನಿಟ್ ಐಎಂಎ ಹೆಲ್ತ್‍ಕೆರ್ ಪ್ರೈ. ಲಿ. ನಂ.149/ಎ ನೆಲಮಹಡಿ, 5ನೆ ಮುಖ್ಯರಸ್ತೆ, 6ನೆ ಸೆಕ್ಟರ್ ಪುಡಿಸ್ತಾನ್ ರೆಸ್ಟೋರೆಂಟ್ ಹತ್ತಿರ, ಎಚ್‍ಎಸ್‍ಆರ್ ಬಡಾವಣೆ, ಬೆಂಗಳೂರು ಅಂದಾಜು ಮೌಲ್ಯ 3.31ಲಕ್ಷ ರೂ., ಫ್ರಂಟ್‍ಲೈನ್ ಪಾರ್ಮಸಿ, ಯುನಿಟ್ ಐಎಂಎ ಹೆಲ್ತ್‍ಕೆರ್ ಪ್ರೈ ಲಿ. ಅಂಗಡಿ ನಂ.898/1 ನೆಲಮಹಡಿ, ಕೋರಮಂಗಲ ಮುಖ್ಯರಸ್ತೆ, 6ನೆ ಬ್ಲಾಕ್, ಕೋರಮಂಗಲ-3.29ಲಕ್ಷ ರೂ., ಫ್ರಂಟ್‍ಲೈನ್ ಫಾರ್ಮಸಿ ಯುನಿಟ್, ಐಎಂಎ ಹೆಲ್ತ್‍ಕೆರ್ ಪ್ರೈ.ಲಿ. ಅಂಗಡಿ ನಂ. 343/ 34 2ನೆ ಅಡ್ಡರಸ್ತೆ, 32ನೆ `ಇ' ಅಡ್ಡರಸ್ತೆ, 4ನೆ ಟಿ ಬ್ಲಾಕ್, ಜಯನಗರ 1.4ಲಕ್ಷ ರೂ., ಫ್ರೆಂಟ್‍ಲೈನ್ ಫಾರ್ಮಸಿ ಯುನಿಟ್ ಐಎಂಎ ಹೆಲ್ತೆಕೇರ್ ಪ್ರೈ.ಲಿ. ನಂ.8, ಅಡ್ಡರಸ್ತೆ, ನಂ.170, ಕೆ.ಇ.ಬಿ. ಹೆ.ಬಿಸಿ.ಎನ್. ಬಡಾವಣೆ, ಬನ್ನೇರಘಟ್ಟ ಮುಖ್ಯರಸ್ತೆ, ಜಯದೇವ ಆಸ್ಪತ್ರೆ ಹತ್ತಿರ ಎದುರು, ಬಿ.ಟಿ.ಎಂ. 2ನೇ ಹಂತ, ಬೆಂಗಳೂರು ಇಲ್ಲಿ ಸೇರಿದಂತೆ ನಗರ ಎಂಟು ಕಡೆಗಳಲ್ಲಿರುವ ಮಳಿಗೆಗಳು ಪೀಠೋಪಕರಣಗಳು ಹಾಗೂ ಇತರೆ ವಸ್ತುಗಳನ್ನು ಹರಾಜು ಮಾಡಲು ಜಿಲ್ಲಾಧಿಕಾರಿಗಳಿಂದ ಅಧಿಕೃತ ಜ್ಞಾಪನಾ ಹೊರಡಿಸಲಾಗಿದೆ.

ಸದರಿ ವಸ್ತುಗಳನ್ನು ಪರಿಶೀಲಿಸಿಕೊಂಡು ವೀಕ್ಷಿಸಲು ಆ.10ರಿಂದ ಆ.12 ಮತ್ತು ಆ.14ರಂದು ನಿಗದಿಪಡಿಸಲಾಗಿದೆ. ಹರಾಜು ಪ್ರಕ್ರಿಯೆ (ಲೈವ್ ಬಿಡ್ಡಿಂಗ್) ಆ. 17ರ ಬೆಳಗ್ಗೆ 11 ಗಂಟೆಯ ವರೆಗೆ ಚಾಲ್ತಿಯಲ್ಲಿರುತ್ತದೆ.  ಹರಾಜಿಗೆ ಸಂಬಂಧಪಟ್ಟ ಷರತ್ತುಗಳು ಮತ್ತಿತರ ವಿವರಗಳಿಗೆ ವೆಬ್‍ಸೈಟ್ ಅನ್ನು ವೀಕ್ಷಿಸಬಹುದು ಎಂದು ವಿಶೇಷ ತಹಸೀಲ್ದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News