ಬೆಂಗಳೂರು: ನಗರದಲ್ಲಿ ಕೋವಿಡ್ ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಏರಿಕೆ

Update: 2020-08-05 16:43 GMT

ಬೆಂಗಳೂರು, ಆ.5 : ಸಿಲಿಕಾನ್ ಸಿಟಿಯಲ್ಲಿ ಹೊಸ ಸೋಂಕಿತರಿಗಿಂದ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯೇ ಅಧಿಕವಾಗಿದ್ದು, ಗುಣಮುಖರಾದವರ ಸಂಖ್ಯೆ 30 ಸಾವಿರ ದಾಟಿದೆ.

ರಾಜಧಾನಿಯಲ್ಲಿ ಕಳೆದ ನಾಲ್ಕು ದಿನಗಳಿಗೆ ಹೋಲಿಸಿಕೊಂಡರೆ ಸೋಂಕಿತರ ಪಟ್ಟಿಗಿಂತ ಗುಣಮುಖರಾದವರೇ ಅಧಿಕವಾಗಿರುವುದು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಆ.2 ರಿಂದ ನಿರಂತರವಾಗಿ ಪ್ರತಿದಿನ ಪತ್ತೆಯಾಗುತ್ತಿರುವ ಸೋಂಕಿತರಿಗಿಂತ ಅಧಿಕ ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗುತ್ತಿದ್ದಾರೆ. 

ಬುಧವಾರ ನಗರದಲ್ಲಿ 1,848 ಮಂದಿ ಹೊಸ ಸೋಂಕಿತರು ಪತ್ತೆಯಾದರೆ 3,083 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ಮೂಲಕ  ಬೆಂಗಳೂರಿನಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 30,960ಕ್ಕೆ ಏರಿಕೆಯಾಗಿದೆ.
ಇಂದು ಪತ್ತೆಯಾದ 1,848 ಹೊಸ ಸೋಂಕಿತರ ಪೈಕಿ 1,192 ಪುರುಷರು, 652 ಮಹಿಳೆಯರು, ನಾಲ್ವರು ಲೈಂಗಿಕ ಅಲ್ಪ ಸಂಖ್ಯಾತರಾಗಿದ್ದಾರೆ. ಬೆಂಗಳೂರಿನಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 64,881ಕ್ಕೆ ಏರಿಕೆಯಾಗಿದೆ. 32,757 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಸಾವನ್ನಪ್ಪಿದವರ ವಿವರ: ಬುಧವಾರ ನಗರದಲ್ಲಿ ಸೋಂಕಿನಿಂದಾಗಿ 29 ಮಂದಿ ಮೃತಪಟ್ಟಿದ್ದಾರೆ. ಅದರಲ್ಲಿ 19 ಮಂದಿ ಪುರುಷರು, 10 ಮಂದಿ ಮಹಿಳೆಯರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

25 ಸಾವಿರದತ್ತ ಕಂಟೈನ್ಮೆಂಟ್ ವಲಯ: ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಕಂಟೈನ್ಮೆಂಟ್ ಪ್ರದೇಶಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, 24, 826 ಕಂಟೈನ್ಮೆಂಟ್  ವಲಯ ಈವರೆಗೆ ಸೃಷ್ಠಿಯಾಗಿದೆ. ಈ ಪೈಕಿ 10,924 ಕಂಟೈನ್ಮೆಂಟ್ ಪ್ರದೇಶ ಕಂಟೈನ್ಮೆಂಟ್ ಮುಕ್ತವಾಗಿವೆ. ಇನ್ನು 13,902 ಸಕ್ರಿಯ ಕಂಟೈನ್ಮೆಂಟ್ ಪ್ರದೇಶಗಳಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News