ಆ. 10ರಂದು ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟ : ಸಚಿವ ಸುರೇಶ್ ‌ಕುಮಾರ್

Update: 2020-08-07 11:56 GMT

ಬೆಂಗಳೂರು, ಆ.7: ರಾಜ್ಯದಲ್ಲಿ ಕೊರೋನ ಆತಂಕದ ನಡುವೆಯೇ ನಡೆದ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಆಗಸ್ಟ್ 10 ರಂದು ಪ್ರಕಟಗೊಳ್ಳಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಈ ಬಗ್ಗೆ ಶಿಕ್ಷಣ ಸಾಮಾಜಿಕ ಜಾಲತಾಣದಲ್ಲಿ ಸಚಿವರು ಮಾಹಿತಿ ನೀಡಿದ್ದಾರೆ. ಈ ಬಾರಿ ಸುಮಾರು 8.5 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ರಾಜ್ಯಾದ್ಯಂತ 220 ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆ ನಡೆದಿತ್ತು. 

ಕೊರೋನ ಹಿನ್ನೆಲೆ ಫಲಿತಾಂಶವನ್ನು ವಿದ್ಯಾರ್ಥಿಗಳ ಅಥವಾ ಪೋಷಕರ ಮೊಬೈಲ್‍ಗೆ ಕಳಿಸಿಕೊಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಜೊತೆಗೆ ಎಸೆಸೆಲ್ಸಿ ಬೋರ್ಡ್ ಅಧಿಕೃತ ವೆಬ್‍ಸೈಟ್ www.sslc.kar.nic.in ಹಾಗೂ karresults.nic.in ನಲ್ಲಿ ಕೂಡ ಫಲಿತಾಂಶ ಪಡೆಯಬಹುದಾಗಿದೆ.

ಸೋಮವಾರ ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟಗೊಳ್ಳಲಿದೆ. ಕಳೆದ ಬಾರಿ ರಾಜ್ಯಾದ್ಯಂತ ಶೇ. 73.70 ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ಕೋವಿಡ್ ಆತಂಕದ ನಡುವೆ ಎಷ್ಟು ಶೇಕಡ ಫಲಿತಾಂಶ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News