ಉತ್ತರ ಪ್ರದೇಶದಲ್ಲಿ ರವಿಪೂಜಾರಿ ಸಹಚರನ ಸೆರೆ

Update: 2020-08-07 12:06 GMT

ಬೆಂಗಳೂರು, ಆ.7: ಭೂಗತ ಪಾತಕಿ ರವಿಪೂಜಾರಿ ಬಂಧನ ಪ್ರಕರಣ ಸಂಬಂಧ ಕಾರ್ಯಾಚರಣೆ ಮುಂದುವರೆಸಿರುವ ಸಿಸಿಬಿ ಪೊಲೀಸರು, ಆತನ ಸಹಚರನೋರ್ವನನ್ನು ಉತ್ತರ ಪ್ರದೇಶದಲ್ಲಿ ಬಂಧಿಸಿ, ಬೆಂಗಳೂರಿಗೆ ಕರೆತಂದಿದ್ದಾರೆ.

ಉತ್ತರ ಪ್ರದೇಶದ ಮುಝಾಫರ್ ನಗರ ನಿವಾಸಿ ಇಕ್ಲಾಕ್ ಖುರೇಷಿ(45) ಬಂಧಿತ ಆರೋಪಿಯಾಗಿದ್ದು, ಈತ 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರವಿಪೂಜಾರಿ ಗುಂಪಿನಲ್ಲಿ ಪ್ರಮುಖ ಸದಸ್ಯನಾಗಿದ್ದ ಆರೋಪಿ ಇಕ್ಲಾಕ್ ಖುರೇಷಿ, ಶಬನಮ್ ಡೆವೆಲಪರ್ಸ್ ಶೂಟೌಟ್ ಪ್ರಕರಣದಲ್ಲಿ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದ್ದ. ಅಲ್ಲದೆ, 2007ನೇ ಸಾಲಿನಲ್ಲಿ ಇಲ್ಲಿನ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಜರುಗಿದ್ದ ಈ ಕೃತ್ಯದಲ್ಲಿ ಇಬ್ಬರ ಹತ್ಯೆ ಮಾಡಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ರವಿ ಪೂಜಾರಿ ಅನ್ನು ವಿದೇಶದಿಂದ ಭಾರತಕ್ಕೆ ಕರೆತಂದ ನಂತರ, ಇಕ್ಲಾಕ್ ಖುರೇಷಿ ಬಂಧನಕ್ಕೆ ವಿಶೇಷ ತಂಡವೊಂದನ್ನು ರಚನೆ ಮಾಡಲಾಗಿತ್ತು. ಆರೋಪಿ ಉತ್ತರ ಪ್ರದೇಶದ ಮೂಲತಃನಾಗಿದ್ದರೂ, ನಾಗಮಂಗಲದಲ್ಲಿ ನೆಲೆಸಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News