ರಮ್ ಮಂದಿರ್ ಎಂದು ಬರೆದು ಅವಹೇಳನಕಾರಿ ಪೋಸ್ಟ್: ಬೆಂಗಳೂರಿನಲ್ಲಿ ಯುವತಿ ವಿರುದ್ಧ ಎಫ್ಐಆರ್

Update: 2020-08-08 18:57 GMT

ಬೆಂಗಳೂರು, ಆ.8: ಅಯೋಧ್ಯೆಯ ರಾಮ ಮಂದಿರ ಕುರಿತು ರಮ್ ಮಂದಿರ್ ಎಂದು ಬರೆದು ಅವಹೇಳನಕಾರಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ ಆರೋಪದಡಿ ಯುವತಿಯೊಬ್ಬಕೆ ವಿರುದ್ಧ ಇಲ್ಲಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಲೀಸಾ ಗಂಗೂಲಿ ಎಂಬಾಕೆ ವಿರುದ್ಧ ಐಪಿಸಿ-1860 ಅಡಿ 153ಎ, 295 ಹಾಗೂ 295ಎ ಅಡಿ ಮೊಕದ್ದಮೆ ದಾಖಲಾಗಿದೆ ಎಂದು ತಿಳಿದುಬಂದಿದೆ.

ನ್ಯಾಯವಾದಿ ಯೋಗೇಂದ್ರ ಹೊಡಗೊಟ್ಟ ಎಂಬುವರು ದೂರು ನೀಡಿದ್ದು, ಧರ್ಮವನ್ನು ನಿಂದಿಸಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವ ಲೀಸಾ ಗಂಗೂಲಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News