‘ಕನ್ನಡ ಮ್ಯಾಕ್‍ಬೆತ್‍ಗಳು’ ಕೃತಿಗೆ ಸೂ.ವೆಂ. ಆರಗ ವಿಮರ್ಶಾ ಪ್ರಶಸ್ತಿ

Update: 2020-08-08 18:48 GMT

ಬೆಂಗಳೂರು, ಆ.8: ಬಿಎಂಶ್ರೀ ಪ್ರತಿಷ್ಠಾನ ನೀಡುವ ‘ಸೂ.ವೆಂ. ಆರಗ ವಿಮರ್ಶಾ ಪ್ರಶಸ್ತಿ'ಗೆ 2019 ರಲ್ಲಿ ಪ್ರಕಟವಾದ ಡಾ.ಎಂ. ಉಷಾ ಅವರ ‘ಕನ್ನಡ ಮ್ಯಾಕ್‍ಬೆತ್‍ಗಳು' ಕೃತಿಯನ್ನು ಆಯ್ಕೆ ಮಾಡಿದೆ.

ಪ್ರಶಸ್ತಿಯು 10 ಸಾವಿರ ರೂ. ಹಾಗೂ ಸ್ಮರಣಿಕೆಗಳನ್ನೊಳಗೊಂಡ ಪ್ರಶಸ್ತಿಯನ್ನು ಪುರಸ್ಕೃತರಿಗೆ ಮುಂದೆ ನಿಗದಿಪಡಿಸಲಾಗುವ ದಿನಾಂಕದಂದು ಎಂವಿಸೀ ಸಭಾಂಗಣದಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News