ಜಯನಗರದ ಜನರಲ್ ಆಸ್ಪತ್ರೆಗೆ ಶಾಸಕರ ನಿಧಿಯಿಂದ 1 ಕೋಟಿ ರೂ. ನೀಡಲು ಶಾಸಕಿ ಸೌಮ್ಯ ರೆಡ್ಡಿ ನಿರ್ಧಾರ

Update: 2020-08-09 17:48 GMT

ಬೆಂಗಳೂರು, ಆ.9 : ಕೊರೋನ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಜಯನಗರದ ಜನರಲ್ ಆಸ್ಪತ್ರೆಗೆ ಶಾಸಕಿ ಸೌಮ್ಯರೆಡ್ಡಿ ತನ್ನ ಶಾಸಕರ ನಿಧಿಯಿಂದ ಒಂದು ಕೋಟಿ ರೂಪಾಯಿ ಅನುದಾನ ನೀಡಲು ನಿರ್ಧರಿಸಿದ್ದಾರೆ.

ತನ್ನ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶಾಸಕಿ ಸೌಮ್ಯಾ ರೆಡ್ಡಿ ಇತ್ತೀಚೆಗೆ ಕೊರೋನ ರೋಗಿಯೊಬ್ಬರಿಗೆ ವಾಟ್ಸಾಪ್ ಮೆಸೇಜ್ ಮೂಲಕ ಸ್ಪಂದಿಸಿ ಸುದ್ದಿಯಾಗಿದ್ದರು. ಇದೀಗ ಜಯನಗರದ ಜನರಲ್ ಆಸ್ಪತ್ರೆಗೆ ಸೂಕ್ತ ಸಲಕರಣೆಗಳನ್ನು ಖರೀದಿಸಲು ತನ್ನ ನಿಧಿಯಿಂದ ಹಣವನ್ನು ನೀಡಲು ಮುಂದಾಗಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿರುವ ಶಾಸಕಿ ಸೌಮ್ಯಾ ರೆಡ್ಡಿ, ಇತ್ತೀಚೆಗೆ ಜಯನಗರದ ಜನರಲ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಆಸ್ಪತ್ರೆಯಲ್ಲಿ ಇರುವಂತಹ ಸಮಸ್ಯೆಗಳು ಮತ್ತು ಕೆಲವು ಅಗತ್ಯಗಳ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಹೀಗಾಗಿ ಶಾಸಕರ ನಿಧಿಯಿಂದ ಒಟ್ಟು 1 ಕೋಟಿ ರೂಪಾಯಿ ನೀಡಲು ನಿರ್ಧರಿಸಿದ್ದೇನೆ. ಈ ಸಂಬಂಧ ನಾನು ಬೆಂಗಳೂರು ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿರವರನ್ನು ಹಾಗೂ ಬಿಬಿಎಂಪಿ ಆಯುಕ್ತರು ಮಂಜುನಾಥ್ ಪ್ರಸಾದ್‍ರವರನ್ನು ಭೇಟಿ ಮಾಡಿ ಪ್ರಸ್ತಾಪ ಸಲ್ಲಿಸಿದೆ. ಅಗತ್ಯವಿರುವುದನ್ನು ತ್ವರಿತವಾಗಿ ಮಾಡಲು ಸರಕಾರವನ್ನು ವಿನಂತಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News