ಟ್ವಿಟರಿಗರ ಆಕ್ರೋಶಕ್ಕೆ ಗುರಿಯಾದ ಬೆಂಗಳೂರಿನ ರೈಲ್ವೇ ನಿಲ್ದಾಣದ 'ಹಿಂದಿ ನಾಮಫಲಕ'

Update: 2020-08-10 13:10 GMT

ಬೆಂಗಳೂರು, ಆ.10: ನಗರದ ಕೆಎಸ್‍ಆರ್ ರೈಲ್ವೆ ನಿಲ್ದಾಣದಲ್ಲಿ ಇರುವ ಮೆಷಿನ್‍ಗಳ ಮೇಲೆ ಹಿಂದಿ ಫಲಕವನ್ನು ಅಳವಡಿಸಿರುವುದನ್ನು ಖಂಡಿಸಿ ಟ್ವಿಟರ್ ಮೂಲಕ ತಮ್ಮ ಆಕ್ರೋಶವನ್ನು ಸಾರ್ವಜನಿಕರು ಹೊರಹಾಕಿದ್ದಾರೆ.

ಟ್ವಿಟ್ಟರ್ ನಲ್ಲಿ ಕೆಲವರು ದಕ್ಷಿಣ ಭಾರತದಲ್ಲಿ ಹಿಂದಿ ಭಾಷೆಯಲ್ಲಿ ಫಲಕವನ್ನ ಯಾಕೆ ಅಳವಡಿಸಲಾಗಿದೆ ಎಂದು ರೈಲ್ವೇ ಇಲಾಖೆಗೆ ಪ್ರಶ್ನಿಸಿದ್ದಾರೆ. ಇದಕ್ಕೆ ರೈಲ್ವೇ ಇಲಾಖೆಯು ಈ ಮೆಷಿನ್ ಭಾರತದಲ್ಲಿದೆ ಎಂದು ಉತ್ತರ ನೀಡಿದೆ. ಇಲಾಖೆಯ ಉತ್ತರಕ್ಕೆ ಆಕ್ರೋಶಗೊಂಡಿರುವ ಕೆಲವರು ನಾವು ಭಾರತೀಯರು. ಆದರೆ, ಹಿಂದಿ ನಮ್ಮ ಮಾತೃಭಾಷೆ ಅಲ್ಲ ಎಂದು ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.

ಇದಕ್ಕೆ ಟ್ವಿಟ್ಟರ್ ನಲ್ಲಿ ಉತ್ತರ ನೀಡಿರುವ ರೈಲ್ವೆ ಅಧಿಕಾರಿಗಳು ಮಹತ್ವದ ಮಾಹಿತಿಯನ್ನ ಸ್ಥಳೀಯ ಭಾಷೆಯಲ್ಲಿ ನೀಡುವ ಪ್ರಯತ್ನ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದೆ. ಅಲ್ಲದೆ, ಫಲಕದಲ್ಲೂ ಭಾಷೆ ವಿಷಯ ಎತ್ತುವುದು ಸರಿಯಲ್ಲ. ಈ ಮೆಷಿನ್‍ನ ಕಂಪನಿಯೊಂದು ಕೊಡುಗೆಯಾಗಿ ನೀಡಿದ್ದಾರೆ. ಅವರ ಕಾರ್ಯವನ್ನ ಅಭಿನಂದಿಸುವ ಬದಲು ಪ್ರತಿ ಬಾರಿಯೂ ಹಿಂದಿ ವಿರೋಧಿ ನಿಲುವು ಪ್ರದರ್ಶನ ಮಾಡುವುದು ಸಮಂಜಸವಲ್ಲ ಎಂದು ಟ್ವೀಟ್ ಮಾಡಿದೆ. ರೈಲ್ವೇ ಇಲಾಖೆಯ ಈ ವಾದವನ್ನು ಒಪ್ಪದ ಕೆಲವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಖಾಸಗಿ ಕಂಪನಿಯೊಂದು ಕೈ ತೊಳೆಯುವ ಹಾಗೂ ಶೂ ಪಾಲಿಷ್ ಮೆಷಿನ್‍ಗಳನ್ನ ರೈಲ್ವೇ ಇಲಾಖೆಗೆ ಕೊಡುಗೆಯಾಗಿ ನೀಡಿತ್ತು. ಈ ಮಿಷಿನ್‍ಗಳ ಮೇಲೆ ಹಿಂದಿ ನಾಮ ಫಲಕ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News