ಸರಕಾರಿ ಭೂಮಿ ಕಬಳಿಕೆ ಆರೋಪ: 28 ರಿಯಲ್ ಎಸ್ಟೇಟ್ ಮಧ್ಯವರ್ತಿಗಳ ವಿರುದ್ಧ ಎಫ್‍ಐಆರ್ ದಾಖಲು

Update: 2020-08-10 14:49 GMT

ಬೆಂಗಳೂರು, ಆ.10: ಸರಕಾರಿ ಭೂಮಿ ಕಬಳಿಕೆ ಯತ್ನ ಆರೋಪದಡಿಯಲ್ಲಿ 28 ರಿಯಲ್ ಎಸ್ಟೇಟ್ ಮಧ್ಯವರ್ತಿಗಳ ವಿರುದ್ಧ ಇಲ್ಲಿನ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಯಲಹಂಕ ತಹಶೀಲ್ದಾರ್ ಎನ್. ರಘುಮೂರ್ತಿ ನೀಡಿದ ದೂರಿನ ಮೇರೆಗೆ ಎಫ್‍ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಪ್ರಕರಣ ಸಂಬಂಧ ತಹಶೀಲ್ದಾರ್ ಠಾಣೆಯ ಬಳಿಯೂ ಸುಳಿದಿಲ್ಲ. ಇದಕ್ಕೆ ಸಂಬಂಧಿಸಿರುವ ಯಾವುದೇ ದಾಖಲೆಗಳನ್ನು ಸಲ್ಲಿಕೆಯೂ ಮಾಡಿಲ್ಲ. ಹಾಗಾಗಿ, ಸಂಪಿಗೆಹಳ್ಳಿ ಪೊಲೀಸರು ಪ್ರಕರಣವನ್ನು ಇನ್ನೂ ಕೈಗೆತ್ತಿಕೊಳ್ಳದೇ ನಿರ್ಲಕ್ಷ್ಯ ತೋರುತ್ತಿದ್ದಾರೆಂಬ ಆರೋಪ ಕೇಳಿಬರುತ್ತಿದೆ.

ಏನಿದು ಆರೋಪ?: ಯಲಹಂಕ ತಾಲೂಕಿನ ಚೊಕ್ಕನಹಳ್ಳಿ ಗ್ರಾಮ ಸರ್ವೆ ಸಂಖ್ಯೆ 77/4, 75/6 ರ, 17.28 ಎಕರೆ ಇರುವ ಸದ್ಯದ ಮಾರುಕಟ್ಟೆ ಬೆಲೆಯಲ್ಲಿ ಸುಮಾರು 500 ಕೋಟಿ ಮೌಲ್ಯದ ಬೆಲೆಬಾಳುವ ಸರಕಾರಿ ಜಮೀನನ್ನು ಮಧ್ಯವರ್ತಿಗಳಾದ ರಾಜ ರೆಡ್ಡಿ, ಅಶ್ವಥ್ ವೈ, ಕಧೀರ್ ಲಕ್ಕಪ್ಪ, ಮುನಿರೆಡ್ಡಿ ಸೇರಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅದನ್ನು ಕಬಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪದಡಿ ಅವರ ಸಹಚರರ ವಿರುದ್ಧವೂ ಎಫ್‍ಐಆರ್ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News