ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶವಿಲ್ಲ: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

Update: 2020-08-11 16:16 GMT

ಬೆಂಗಳೂರು, ಆ.11: ಯಾವುದೇ ಕಾರಣಕ್ಕೂ ಬೀದಿಯಲ್ಲಿ ಗಣೇಶ ಕೂರಿಸುವಂತಿಲ್ಲ. ಇದಕ್ಕೆ ಯಾರಿಗೂ ಅನುಮತಿ ಇಲ್ಲ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿಯ ನಿರ್ಣಯವನ್ನು ಪುನರ್ ಪರಿಶೀಲಿಸುವ ಮಾತೇ ಇಲ್ಲ. ಕೇಂದ್ರ ಸರಕಾರ ಆ.31ರವರೆಗೆ ಅನ್ವಯವಾಗುವಂತೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅದರಲ್ಲಿ ಯಾವುದೇ ಸಭೆ ಸಮಾರಂಭ, ಹಬ್ಬ- ಆಚರಣೆಗಳನ್ನು ಮಾಡುವಂತಿಲ್ಲ ಎಂದು ತಿಳಿಸಲಾಗಿದೆ ಎಂದರು.

ನಗರದಲ್ಲಿ ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಜನರನ್ನ ಗುಂಪು ಸೇರಿಸಿಕೊಂಡು ಕಾರ್ಯಕ್ರಮ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.

ಗಣೇಶ ತಯಾರಿ ಮಾಡುವವರ ಕಷ್ಟ ಅರ್ಥವಾಗುತ್ತೆ. ಅವರು ಈ ವರ್ಷ ಮಾರಾಟ ಆಗದೇ ಇರುವ ಗಣೇಶ ಮೂರ್ತಿಯನ್ನು ಮುಂದಿನ ವರ್ಷ ಮಾರಾಟ ಮಾಡಬಹುದು. ಹೀಗಾಗಿ ಗಣೇಶ ಹಬ್ಬದ ನಿರ್ಣಯವನ್ನು ನಾವು ಕೈಬಿಡುವ ಮಾತೇ ಇಲ್ಲ. ಕೆರೆಗಳ ಬಳಿ ಈ ಬಾರಿ ಗಣೇಶನ ಬಿಡಲು ಅವಕಾಶ ಮಾಡಿಕೊಡುವುದಿಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News