ಉಚಿತವಾಗಿ ರೈತರಿಗೆ ಸಾವಯವ ಗೊಬ್ಬರ ನೀಡಲು ಬಿಬಿಎಂಪಿ ನಿರ್ಧಾರ

Update: 2020-08-11 17:28 GMT

ಬೆಂಗಳೂರು, ಆ.11: ಬಿಬಿಎಂಪಿಯು ನಗರದ ಘನತ್ಯಾಜ್ಯ ಸಂಸ್ಕರಣಾ ಘಟಕಗಳಲ್ಲಿರುವ ಸಾವಯವ ಗೊಬ್ಬರವನ್ನು ರೈತರಿಗೆ ಉಚಿತವಾಗಿ ನೀಡಲು ನಿರ್ಧರಿಸಿದೆ.

ನಗರದ ಏಳು ಘನತ್ಯಾಜ್ಯ ಸಂಸ್ಕರಣಾ ಘಟಕಗಳಲ್ಲಿ ಪ್ರತಿದಿನ ಸ್ವೀಕರಿಸುವ ವಿಂಗಡಿಸಿದ ಹಸಿ ತ್ಯಾಜ್ಯವನ್ನು ವಿಂಡೋ ವಿಧಾನದಲ್ಲಿ ಸಂಸ್ಕರಿಸಿ, ನಂತರ 35 ಮಿ.ಮೀ ಮತ್ತು 16 ಮಿ.ಮೀ ಅಳತೆ ಜಾಲಿಯ ಟ್ರೋಮೆಲ್‍ಗಳಲ್ಲಿ ಜರಡಿಯಾಗಿ ಉಪಉತ್ಪನ್ನವಾಗಿ ಹೊರಬರುವ 35 ಮಿ.ಮೀ ಮತ್ತು  16 ಮಿ.ಮೀ ಅಳತೆಯ ಎರಡನೇ ದರ್ಜೆಯ ಕಾಂಪೋಸ್ಟ್ ಅನ್ನು ರೈತರಿಗೆ ಉಚಿತವಾಗಿ ನೀಡುವ ಮುಖಾಂತರ ಮತ್ತು ರೈತರು ಇದನ್ನು ತೆಂಗು, ಅಡಿಕೆ, ಮಾವು, ಸೀಬೆ, ದಾಳಿಂಬೆ ಮತ್ತು ಇನ್ನಿತರೆ ತೋಟಗಾರಿಕೆ ಬೆಳೆಗಳಿಗೆ ಗೊಬ್ಬರವಾಗಿ ನೀಡಿದಲ್ಲಿ ಉತ್ತಮವಾದ ಬೆಳೆ ಪಡೆಯುವುದರೊಂದಿಗೆ ನೆಲದ ಫಲವತ್ತತೆ ಕೂಡ ವೃದ್ಧಿಯಾಗುವುದೆಂದು ತಜ್ಞರು ಅಭಿಪ್ಪಟ್ಟಿದ್ದಾರೆ.

ಆದ್ದರಿಂದ ಘಟಕಗಳಲ್ಲಿ ರೈತರಿಗೆ ಉಚಿತವಾಗಿ ನೀಡಲು ನಿರ್ಧರಿಸಿರುವ 35 ಮಿ.ಮೀ ಅಳತೆಯ ಸಾವಯವ ಗೊಬ್ಬರವನ್ನು ರೈತರು ತಮ್ಮ ಲಾರಿ, ಟ್ರಾಕ್ಟರ್ ವ್ಯವಸ್ಥೆಯೊಂದಿಗೆ ಹತ್ತಿರದ ಘಟಕಕ್ಕೆ ತೆರಳಿ ಉಚಿತವಾಗಿ ಗೊಬ್ಬರ ಪಡೆದುಕೊಂಡು ತೋಟಗಾರಿಕೆ ಬೆಳೆಗಳಿಗೆ ಗೊಬ್ಬರವಾಗಿ ನೀಡಿ ಉತ್ತಮವಾದ ಬೆಳೆ ಪಡೆಯಬಹುದಾಗಿದೆ ಎಂದು ಬಿಬಿಎಂಪಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News