ಆಸ್ತಿ-ಪಾಸ್ತಿಗಳ ವೆಚ್ಚವನ್ನು ಗಲಭೆಕೋರರಿಂದಲೇ ಭರಿಸಬೇಕು: ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ

Update: 2020-08-12 17:32 GMT

ಬೆಂಗಳೂರು, ಆ. 12: ನಗರದಲ್ಲಿ ನಿನ್ನೆ ನಡೆದ ಘಟನೆ ಪೂರ್ವನಿಯೋಜಿತ ಹಾಗೂ ಪೂರ್ವ ಸಿದ್ಧತೆಯಿಂದ ನಡೆದಿದೆ. ಈ ಘಟನೆಯಲ್ಲಿ ಹಾನಿಗೊಂಡಿರುವ ಆಸ್ತಿ-ಪಾಸ್ತಿಗಳ ವೆಚ್ಚವನ್ನು ಗಲಭೆಕೋರರಿಂದಲೇ ಭರಿಸಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ ಆಗ್ರಹಿಸಿದ್ದಾರೆ.

ಗಲಭೆ ನಡೆಸುವ ಮುಂಚೆ ಒಂದು ಸಂಘಟನೆ ಮುಖಂಡರು ನಾಗವಾರದ ಅರೇಬಿಕ್ ಕಾಲೇಜಿನಲ್ಲಿ, ಮತ್ತೊಂದು ಗುಂಪು ವೆಂಕಟೇಶ್ವರ ರಸ್ತೆ ಹಾಗೂ ಮೂರನೆ ತಂಡ ಬಬಲ್‍ಗಮ್ ಫಾಕ್ಟರಿಯಲ್ಲಿ ಸೇರಿ ಡಿ.ಜಿ.ಹಳ್ಳಿ ಠಾಣೆ ಹಾಗೂ ಸಾರ್ವಜನಿಕ ಆಸ್ತಿಪಾಸಿಗೆ ಹಾನಿ ಮಾಡುವ ಪಿತೂರಿ ನಡೆಸಿದ್ದರು. ಆ ವ್ಯಾಪ್ತಿಯಲ್ಲಿ ಸಿಸಿ ಟಿವಿ ಕ್ಯಾಮರಗಳನ್ನು ಹಾಳುಗೆಡವಿದ್ದಾರೆ. ಈ ಎಲ್ಲ ಕುಕೃತ್ಯಗಳು ಪೂರ್ವ ನಿಯೋಜಿತ ಗಲಭೆ ಎಂಬುದು ಸ್ಪಷ್ಟ ಎಂದು ಅವರು ಆರೋಪಿಸಿದರು.

ಈ ಕೃತ್ಯದ ಹಿಂದೆ ಪಿಎಫ್‍ಐ, ಎಸ್‍ಡಿಪಿಐ ಎರಡು ಸಂಘಟನೆಗಳು ಕಾರಣಕರ್ತರಾಗಿದ್ದು, ಕೆಲ ತಿಂಗಳ ಹಿಂದೆ ಮಂಗಳೂರು ಬಂದರು ಪೊಲೀಸ್ ಠಾಣೆ ಮೇಲಿನ ದಾಳಿ ಮತ್ತು ನಿನ್ನೆ ನಡೆದ ದಾಳಿ ಘಟನೆ ಒಂದೇ ತರಹದ ಹಾಗೂ ಒಂದೇ ರೀತಿಯ ಕೃತ್ಯಗಳು. ಈ ಎಲ್ಲ ವ್ಯವಸ್ಥಿತ ಗಲಭೆಯಲ್ಲಿ ಅಲ್ಲಿನ ಡ್ರಗ್ಸ್ ಮಾಫಿಯಾ ಹಾಗೂ ಗೂಂಡಾಗಳ ಕೈವಾಡವಿದೆ. ಸರಕಾರ ಈಗಾಗಲೇ ನೂರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದು, ಅವರಿಂದಲೇ ಹಾನಿಯಾದ ಆಸ್ತಿ ವೆಚ್ಚ ಭರಿಸಿ, ಅವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಅಶ್ವತ್ಥ ನಾರಾಯಣ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News