ಬೆಂಗಳೂರು: ಕೋವಿಡ್ ಗೆ 22 ಮಂದಿ ಮೃತ್ಯು, 2,452 ಮಂದಿಗೆ ಪಾಸಿಟಿವ್

Update: 2020-08-14 18:17 GMT

ಬೆಂಗಳೂರು, ಆ.14: ನಗರದಲ್ಲಿ ಶುಕ್ರವಾರ ಒಂದೆ ದಿನ 2,452 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಸೋಂಕಿಗೆ 22 ಜನರು ಮೃತರಾಗಿದ್ದಾರೆ.

ನಗರದಲ್ಲಿ ಇಲ್ಲಿಯವರಗೆ ಒಟ್ಟು 84,185 ಸೋಂಕಿತರು ಧೃಢಪಟ್ಟಿದ್ದು, ನಗರದಲ್ಲಿ ಒಟ್ಟು 1,360 ಜನರು ಸೋಂಕಿಗೆ ಬಲಿಯಾಗಿದ್ದು, 49,392 ಜನರು ಇಲ್ಲಿಯವರೆಗೆ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಶುಕ್ರವಾರದಂದು 2,146 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 33,432 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರಚಿಕಿತ್ಸಾಲಯಲ್ಲಿ ಒಟ್ಟು 1,00,828 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ. ಐಸಿಯುನಲ್ಲಿ 330 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗುರುವಾರದ ಬಿಬಿಎಂಪಿ ಕೋವಿಡ್ ವರದಿಯಲ್ಲಿ ನಗರದಲ್ಲಿ ಒಟ್ಟು ಸಕ್ರಿಯ 13,448  ಕಂಟೈನ್ಮೆಂಟ್ ಝೋನ್‍ಗಳಿವೆ. ಇದುವರೆಗೂ 32,497 ಕಂಟೈನ್ಮೆಂಟ್ ಝೋನ್‍ಗಳನ್ನು ಗುರುತಿಸಲಾಗಿದೆ.

ಕಂಟೇನ್ಮೆಂಟ್ ನಿಯಮ ಬದಲಿಸಲು ಸರಕಾರಕ್ಕೆ ಪ್ರಸ್ತಾವನೆ

ಕಂಟೇನ್ಮೆಂಟ್ ಪ್ರದೇಶಗಳ ನಿಯಮ ಬದಲಿಸುವ ಬಗ್ಗೆಯೂ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಬ್ಯಾರಿಕೇಡ್, ತಗಡಿನ ಶೀಟ್ ಅಳವಡಿಸದಿರಲು ಅನುಮತಿ ಕೊಡುವಂತೆ ಕೇಳಲಾಗಿದೆ. ಅಪಾರ್ಟ್‍ಮೆಂಟ್, ಒಂಟಿಮನೆಗಳಲ್ಲಿ ಸೋಂಕು ಕಂಡುಬಂದರೆ ಪೋಸ್ಟರ್ ಅಳವಡಿಸಿ, ಅಕ್ಕಪಕ್ಕದರವರಿಗೆ ಅರಿವು ಮೂಡಿಸಿದಾಗ ಸ್ಥಳೀಯರೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಪರೀಕ್ಷೆಗೆ ಸಹಕರಿಸದಿದ್ದರೆ ಕೇಸ್

ಯಾವುದೇ ಕ್ಷಣದಲ್ಲಾದರೂ ನಗರದ ಹೋಟೆಲ್, ಬೇಕರಿ ಹಾಗೂ ಕಮರ್ಷಿಯಲ್ ಸೆಂಟರ್ ಗಳಲ್ಲಿ ಆರೋಗ್ಯ ಅಧಿಕಾರಿಗಳು ಕೊರೋನ ಪರೀಕ್ಷೆ ನಡೆಸಬಹುದು. ಹೋಟೆಲ್ ಮಾಲಕರು ಸಹಕರಿಸಲೇಬೇಕು. ಇಲ್ಲವಾದಲ್ಲಿ ಅವರ ಮೇಲೆ ಕೇಸ್ ಹಾಕಲಾಗುವುದು ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News