'ಕೋವಿಡ್' ಅಧಿಕೃತ ಮಾಹಿತಿಗಾಗಿ ಸರ್ಕಾರಿ ಜಾಲತಾಣ ಸಂದರ್ಶಿಸಿ

Update: 2020-08-15 07:28 GMT

ಬೆಂಗಳೂರು, ಆ.15:  ಕೋವಿಡ್ ಕುರಿತ ಎಲ್ಲಾ ಅಧಿಕೃತ ಮಾಹಿತಿಗಾಗಿ covid19.karnataka.gov.in ಸರ್ಕಾರಿ ಜಾಲತಾಣವನ್ನು ಸಂದರ್ಶಿಸಿ ಎಂದು ಯೋಜನಾ, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರೂ ಆದ ರಾಜ್ಯ ಕೋವಿಡ್-19 ರ ತಪಾಸಣಾ ವ್ಯವಸ್ಥೆಯ ಮುಖ್ಯಸ್ಥೆ ಡಾ.ಶಾಲಿನಿ ರಜನೀಶ್  ಇಂದು ಪ್ರಕಟಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಕೋವಿಡ್-19 ಕುರಿತು ಹಲವು ವದಂತಿಗಳು ಹಾಗೂ ಸುಳ್ಳು ಸುದ್ದಿಗಳು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮಾಹಿತಿಯ ಸತ್ಯಾಸತ್ಯೆಯನ್ನು ಈ ಜಾಲತಾಣವನ್ನು ಸಂದರ್ಶಿಸಿ ಸುದ್ದಿ ನಿಖರತೆಯನ್ನು ಖಾತರಿಪಡಿಸಿಕೊಳ್ಳುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಪಾಲಿಕೆಯು ಕೆಲವು ಖಾಸಗೀ ಸಂಸ್ಥೆಗಳ ಜೊತೆಗೂಡಿ ಕೋವಿಡ್-19 ಹೆಸರಿನಲ್ಲಿ ಆರೋಗ್ಯ ಪರೀಕ್ಷೆಗಳನ್ನು ನಡೆಸುತ್ತಿವೆ. ಅಮಾಯಕರಿಂದ ಹಣ ಸುಲಿಗೆ ಮಾಡುತ್ತಿವೆ ಎಂಬ ಆರೋಪಗಳನ್ನು ಅಲ್ಲಗೆಳೆದಿರುವ ಡಾ ಶಾಲಿನಿ ರಜನೀಶ್, ಪಾಲಿಕೆಯ ವ್ಯಾಪ್ತಿಯಲ್ಲಿ ಬಹುತೇಕ ಕೋವಿಡ್-19 ಸಂಬಂಧಿತ ತಪಾಸಣೆಗಳು ಹಾಗೂ ಪರೀಕ್ಷೆಗಳÀನ್ನು ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಸಂಸ್ಥೆಗಳಾದ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಹಾಗೂ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರರೋಗ ವಿಜ್ಞಾನ ಸಂಸ್ಥೆ ( ನಿಮ್ಹಾನ್ಸ್ ) ನಡೆÀಸುತ್ತಿವೆ. ಈ ಸಂಸ್ಥೆಗಳು ನಡೆಸುತ್ತಿರುವ ಪರೀಕ್ಷಾ ವರದಿಗಳು ಅತ್ಯಂತ ವಿಶ್ವಾಸಾರ್ಹವಾಗಿವೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News