ಸ್ಪೀಕರ್ ಕಚೇರಿಯಿಂದ ಮಾಧ್ಯಮ ಸ್ವಾತಂತ್ರ್ಯ ಹರಣ: ಪತ್ರಕರ್ತರ ಸಂಘ ಆಕ್ಷೇಪ

Update: 2020-08-15 12:24 GMT

ಬೆಂಗಳೂರು, ಆ. 15: ವಿಧಾನಸಭಾ ಸ್ಪೀಕರ್ ಕಚೇರಿಯಿಂದ ಮಾಧ್ಯಮ ಸ್ವಾತಂತ್ರ್ಯಹರಣ ಪ್ರಯತ್ನ ನಡೆಸುತ್ತಿರುವುದು ಸರಿಯಲ್ಲ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶಿವಾನಂದ ತಗಡೂರು ಇಂದಿಲ್ಲಿ ಆಕ್ಷೇಪಿಸಿದ್ದಾರೆ.

ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಪ್ರಕರಣವನ್ನು ವಿಧಾನಸಭಾ ಸ್ಪೀಕರ್ `ಹಕ್ಕುಚ್ಯುತಿ' ಸಮಿತಿಗೆ ವಹಿಸಿರುವುದು ಸರಿಯಾದ ಕ್ರಮವಲ್ಲ. ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಮಾಧ್ಯಮ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನ ಖಂಡನೀಯ. ಕೋವಿಡ್ ಸಂದರ್ಭದಲ್ಲಿಯೂ ಸ್ಪೀಕರ್ ಕಚೇರಿ ತೆರೆಯಲಿ ಎನ್ನುವ ಜನಪರ ಕಾಳಜಿಯಿಂದ ಸ್ಪೀಕರ್ ಕಚೇರಿ ಅಧಿಕಾರಿಗಳ ವಿವರಣೆ ಸಹಿತ ವರದಿ ಪ್ರಕಟಿಸಲಾಗಿದೆ. ವರದಿ ಹಕ್ಕುಚ್ಯುತಿ ಆಗುವುದಿಲ್ಲ. ಆದುದರಿಂದ ಸ್ಪೀಕರ್ ಹಕ್ಕುಚ್ಯುತಿ ಪ್ರಕರಣ ಹಿಂಪಡೆಯಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News