ನಿಷೇಧಾಜ್ಞೆ ನಡುವೆ ಮದುವೆಗೆ ಅನುಮತಿ ನೀಡಿದ ಪೊಲೀಸರು

Update: 2020-08-16 17:21 GMT

ಬೆಂಗಳೂರು, ಆ.16: ಕಾವಲ್ ಭೈರಸಂದ್ರ ಹಿಂಸಾಚಾರ ಪ್ರಕರಣ ಸಂಬಂಧ ನಿಷೇಧಾಜ್ಞೆ ಜಾರಿ ಹಿನ್ನೆಲೆ ರವಿವಾರ ನಡೆಯಬೇಕಿದ್ದ ಮದುವೆಗೆ ಅನುಮತಿ ಕೋರಿ ವಧು, ವರರು ಠಾಣೆಗೆ ಆಗಮಿಸಿದ್ದರು.

ಇತ್ತೀಚಿಗಷ್ಟೇ ಗೋರಿಪಾಳ್ಯದ ಕಲ್ಯಾಣ ಮಂಟಪದಲ್ಲಿ ವಧು ಪರ್ವೀನಾ, ವರ ಸೈಯದ್ ಅಝುರುದ್ದೀನ್ ಎಂಬವರಿಗೆ ಮನೆಯವರು ಮದುವೆ ನಿಶ್ಚಯಿಸಿದ್ದರು. ನಿಷೇಧಾಜ್ಞೆ ತೆರವಾಗುವ ನಿರೀಕ್ಷೆಯೊಂದಿಗೆ ಮದುವೆ ತಯಾರಿ ಸಹ ಮಾಡಿಕೊಳ್ಳುತ್ತಿದ್ದರು. ಆದರೆ, 144 ಸೆಕ್ಷನ್ ಜಾರಿ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿದ್ದ ಪೊಲೀಸರು ಜನರಿಗೆ ಓಡಾಡಲು ಬಿಡುತ್ತಿರಲಿಲ್ಲ.

ಹಾಗಾಗಿ, ಮದುವೆ ಮಾಡಿಕೊಳ್ಳಲು ಅನುಮತಿ ಕೋರಿ ವಧು-ವರರು ಠಾಣೆ ಮೆಟ್ಟಿಲೇರಿದ್ದರು. ಇವರ ಮನವಿಗೆ ಸ್ಪಂದಿಸಿದ ಠಾಣಾಧಿಕಾರಿಗಳು ವಿವಾಹಕ್ಕೆ ಅನುಮತಿಸಿ ಶುಭ ಹಾರೈಸಿ ಕಳುಹಿಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News