‘ಐಪಿಎಲ್ ಗೆ ಡ್ರೀಮ್ 11 ಪ್ರಾಯೋಜಕತ್ವ ಪ್ರಧಾನಿಯ ಆತ್ಮ ನಿರ್ಭರ್ ಭಾರತ್ ಕಲ್ಪನೆಗೆ ತದ್ವಿರುದ್ಧ’

Update: 2020-08-19 11:55 GMT

ಹೊಸದಿಲ್ಲಿ: ಈ ಬಾರಿಯ ಐಪಿಎಲ್ ಪ್ರಾಯೋಜಕತ್ವದಿಂದ ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ಚೀನೀ ಮೊಬೈಲ್ ಕಂಪೆನಿ ವೀವೋ ಹಿಂದೆ ಸರಿದ ನಂತರ ಈಗ ಪ್ರಾಯೋಜತ್ವವನ್ನು ಡ್ರೀಮ್ 11 ಪಡೆದಿರುವುದರ ಕುರಿತಂತೆ ಕ್ರಿಕೆಟ್ ಅಸೋಸಿಯೇಶನ್ ಆಫ್ ಬಿಹಾರ್ ಕಾರ್ಯದರ್ಶಿ ಆದಿತ್ಯ ವರ್ಮ ಅವರು ಅಪಸ್ವರ ಎತ್ತಿದ್ದಾರೆ.

ಈ ಪ್ರಾಯೋಜಕತ್ವವು ಪ್ರಧಾನಿ ನರೇಂದ್ರ ಮೋದಿಯ ಆತ್ಮ ನಿರ್ಭರ್ ಭಾರತ್ ಕಲ್ಪನೆಗೆ ತದ್ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಡ್ರೀಮ್ 11 ಸಂಸ್ಥೆ ತಾನು ಸಂಪೂರ್ಣವಾಗಿ ಭಾರತೀಯ ಎಂದು ಹೇಳಿಕೊಂಡಿದ್ದರೂ ವರ್ಮ ಮಾತ್ರ ಅದೊಂದು ಚೀನೀ ಕಂಪೆನಿ ಎಂದಿದ್ದಾರೆ.

“ಈ ಕಂಪೆನಿಯು ಐಪಿಎಲ್ ಫ್ರಾಂಚೈಸಿ ಒಂದರಲ್ಲಿ ದೊಡ್ಡ ಹೂಡಿಕೆ ಮಾಡಿದೆ ಎಂಬ ಸುದ್ದಿಯೂ ಇದೆ'' ಎಂದು ವರ್ಮ ಹೇಳಿದ್ದಾರೆ.

ಡ್ರೀಮ್ 11 ಸಂಸ್ಥೆಯು ಚೀನೀ ಟೆಕ್ನಾಲಜಿ ಸಂಸ್ಥೆ ಟೆನ್ಸೆಂಟ್‍ನಲ್ಲಿ ಶೇ. 20ರಿಂದ ಶೇ 25ರಷ್ಟು  ಪಾಲುದಾರಿಕೆ ಹೊಂದಿದೆಯೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News