×
Ad

ಪೌರಕಾರ್ಮಿಕರ ಮನೆಯಲ್ಲಿ ಪ್ರತ್ಯೇಕ ಸೌಲಭ್ಯಗಳು ಇದೆಯೇ: ಬಿಬಿಎಂಪಿಗೆ ಹೈಕೋರ್ಟ್ ಪ್ರಶ್ನೆ

Update: 2020-08-20 20:30 IST

ಬೆಂಗಳೂರು, ಆ.20: ಕೊರೋನ ಸೋಂಕು ದೃಢಪಟ್ಟಿರುವ 52 ಪೌರಕಾರ್ಮಿಕರಿಗೆ ಮನೆಯಲ್ಲಿಯೇ ಇರಲು ಪ್ರತ್ಯೇಕವಾದ ಸೌಲಭ್ಯಗಳು ಇದೆಯೇ ಎಂಬುದನ್ನು ಪರಿಶೀಲಿಸಲಾಗಿದೆಯೇ ಎಂದು ಬಿಬಿಎಂಪಿಗೆ ಹೈಕೋರ್ಟ್ ಪ್ರಶ್ನಿಸಿದೆ.

ಈ ಕುರಿತು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ, ಮನೆಯಲ್ಲೇ ಕ್ವಾರಂಟೈನ್ ಆಗಲು ಕಳುಹಿಸಿರುವ ಸೋಂಕಿತ ಪೌರಕಾರ್ಮಿಕರ ಮನೆಯಲ್ಲಿ ಶೌಚಾಲಯ ಸಹಿತ ಪ್ರತ್ಯೇಕ ಕೊಠಡಿ ಇದೆಯೇ ಎಂಬುದರ ಬಗ್ಗೆ ವರದಿ ಸಲ್ಲಿಸಲು ತಿಳಿಸಿದೆ.

11,902 ಪೌರಕಾರ್ಮಿಕರಿಗೆ ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆ, 3,872 ಜನರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ. ಅವರಲ್ಲಿ 816 ಜನರಿಗೆ ಸೋಂಕಿರುವುದು ದೃಢಪಟ್ಟಿದೆ. 423 ಜನರನ್ನು ಆಸ್ಪತ್ರೆಗೆ, 341 ಜನರನ್ನು ಕೊರೋನ ಆರೈಕೆ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಬಿಬಿಎಂಪಿ ವಿವರಿಸಿದೆ.

ರಾಜ್ಯದ ಎಲ್ಲ ಪೌರಕಾರ್ಮಿಕರಿಗೂ ಕೊರೋನ ಪರೀಕ್ಷೆ ನಡೆಸದಿರಲು ಕಾರಣ ಏನು ಎಂದು ಪೀಠ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News