×
Ad

ಕೃಷ್ಣ ದೇವಾಡಿಗ

Update: 2020-08-20 20:58 IST

ಮೂಡುಬಿದಿರೆ: ಜಿಲ್ಲೆಯ ಪ್ರಸಿದ್ಧ  ವಾದ್ಯವೃಂದವೆನಿಸಿಕೊಂಡ ಅಶ್ವತ್ಥಪುರ ವಾದ್ಯತಂಡದಲ್ಲಿ  ತವಿಲ್ ವಾದಕರಾಗಿ ಗುರುತಿಸಿಕೊಂಡ ಕೃಷ್ಣ ದೇವಾಡಿಗ(73)  ಹೃದಯಾಘಾತದಿಂದ ನಿಧನ ಹೊಂದಿದರು. ಅವರು ಪತ್ನಿ ಹಾಗೂ ಯುವ ನಾದಸ್ವರವಾದಕ ಉಮಾನಾಥ ದೇವಾಡಿಗ ಸಹಿತ ಇಬ್ಬರು ಪುತ್ರರು ಹಾಗೂ ಪುತ್ರಿಯರನ್ನು ಅಗಲಿದ್ದಾರೆ.

ಗುರು ವೆಂಕಟಸ್ವಾಮಿಯವರಲ್ಲಿ ತವಿಲುವಾದನದ ತರಬೇತಿ ಪಡೆದು, ಬಳಿಕ ಕೃಷ್ಣ ದೇವಾಡಿಗ ಅವರು ಅಶ್ವತ್ಥಪುರ ತಂಡದ ಖಾಯಂ ತವಿಲ್ ವಾದಕರಾಗಿ ಗಮನ ಸೆಳೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News