ಸ್ವಚ್ಛ ಸರ್ವೇಕ್ಷಣೆ: 214ನೇ ಸ್ಥಾನಕ್ಕೆ ಕುಸಿದ ಬೆಂಗಳೂರು
Update: 2020-08-20 23:03 IST
ಬೆಂಗಳೂರು, ಆ.20: ಸ್ವಚ್ಛ ಸರ್ವೇಕ್ಷಣದಲ್ಲಿ ಬಿಬಿಎಂಪಿ ಕಳಪೆ ಸಾಧನೆ ಮಾಡಿದೆ. ಕಳೆದ ಬಾರಿಯ ಪಟ್ಟಿಯಲ್ಲಿ 194ನೇ ಸ್ಥಾನದಲ್ಲಿದ್ದ ಬಿಬಿಎಂಪಿ ಈ ಬಾರಿ 214ನೇ ಸ್ಥಾನಕ್ಕೆ ಕುಸಿದಿದೆ.
ನಗರಗಳ ಸ್ವಚ್ಛತೆ ಹಾಗೂ ಕಸ ವಿಲೇವಾರಿ ಮಾನದಂಡಗಳ ಆಧಾರದ ಮೇಲೆ ಪ್ರತಿ ವರ್ಷ ಕೇಂದ್ರ ಸರಕಾರ 'ಸ್ವಚ್ಛ ಸರ್ವೇಕ್ಷಣ ಅಭಿಯಾನ'ದಲ್ಲಿ ಪ್ರಶಸ್ತಿ ಮತ್ತು ಸ್ಥಾನ ನೀಡುತ್ತದೆ. ಈ ಬಾರಿಯ 'ಸ್ವಚ್ಛ ಸರ್ವೇಕ್ಷಣ 2020' ಫಲಿತಾಂಶ ಹೊರಬಿದ್ದಿದ್ದು, ಭಾರತದ ಸ್ವಚ್ಛ ನಗರ ಎಂಬ ಖ್ಯಾತಿಗೆ ಇಂದೋರ್ ಪಾತ್ರವಾಗಿದೆ. ಭಾರತದ ಸ್ವಚ್ಛ ರಾಜ್ಯ ಎಂಬ ಪಟ್ಟ ಛತ್ತೀಸ್‍ಗಢಕ್ಕೆ ಸಿಕ್ಕಿದೆ.
ಭಾರತದ ಸ್ವಚ್ಛ ನಗರ ಪಟ್ಟಿಯಲ್ಲಿ ಸೂರತ್ ಎರಡನೇ ಸ್ಥಾನದಲ್ಲಿದ್ದರೆ, ಮೂರನೇ ಸ್ಥಾನದಲ್ಲಿ ಮಹಾರಾಷ್ಟ್ರದ ನವಿ ಮುಂಬೈ ಇದೆ.
ಐದನೇ ಸ್ಥಾನ ಸಾಂಸ್ಕೃತಿಕ ನಗರಿ ಮೈಸೂರಿಗೆ ಸಿಕ್ಕಿದೆ. ಇದೇ ಪಟ್ಟಿಯಲ್ಲಿ ಬೆಂಗಳೂರು 214ನೇ ಸ್ಥಾನ ಪಡೆದುಕೊಂಡಿದೆ.