ಅರಸು ದುರ್ಬಲ ವರ್ಗದರಿಗೆ ಆತ್ಮವಿಶ್ವಾಸ ಬಲ ಕೊಟ್ಟ ದೀಮಂತ: ಸಿಎಂ ಯಡಿಯೂರಪ್ಪ

Update: 2020-08-20 17:45 GMT

ಬೆಂಗಳೂರು, ಆ.20: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅರವರ 105ನೆ ಜನ್ಮದಿನೋತ್ಸವದ ಪ್ರಯುಕ್ತ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಧಾನಸೌಧದ ಆವರಣದಲ್ಲಿರುವ ಅವರ ಪ್ರತಿಮೆಯ ಮುಂಭಾದಗಲ್ಲಿರಿಸಿದ್ದ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು.

ಗುರುವಾರ ನಡೆದ ಸರಳ ಸಮಾರಂಭದಲ್ಲಿ ಮಾಲಾರ್ಪಣೆಯ ನಂತರ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಯಡಿಯೂರಪ್ಪನವರು, ಜನಸಾಮಾನ್ಯರ ಬಗ್ಗೆ ದೇವರಾಜ ಅರಸುರವರಿಗೆ ಇದ್ದ ಕಾಳಜಿ ದೂರದೃಷ್ಟಿ ಆಡಳಿತ ನಿರ್ಧಾರಗಳು  ರಾಜ್ಯದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಸಾಧ್ಯವಾಯಿತು. ಎಂಟು ವರ್ಷಗಳ ಮುಖ್ಯಮಂತ್ರಿಯಾಗಿದ್ದ ಅರಸು ಅವರು ತಮ್ಮ ಆಡಳಿತ ವೈಖರಿಯಿಂದ ಸ್ವತಂತ್ರ ಭಾರತದ ಇತಿಹಾಸದಲ್ಲಿ ಅಜರಾಮರಾಗಿದ್ದಾರೆ.

ಅವರ ಕಾಲವನ್ನು ಅರಸು ಯುಗವೆಂದೆ ಪ್ರತಿಯೊಬ್ಬ ಕನ್ನಡಿಗ ಕಾಣುತ್ತಾನೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲರಾದವರಿಗೆ ಆಸರೆ ಆಗುವ ಪರಿಣಾಮ ನೀತಿಗಳನ್ನು ಅನುಷ್ಠಾನಕ್ಕೆ ತಂದಿದ್ದರು ಎಂದು ಹೇಳಿದರು. ದುರ್ಬಲ ವರ್ಗದವರು ಹಾಗೂ ಶೋಷಿತರು ಅನುಭವಿಸುತ್ತಿದ್ದ ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಲು ಮಹತ್ವದ ಸುಧಾರಣೆಗಳನ್ನು ಜಾರಿಗೆ ತರುವ ಮೂಲಕ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಧೀಮಂತ ವ್ಯಕಿ.

`ಉಳುವವನೆ ಭೂಮಿಯ ಒಡೆಯ' ಎಂಬ ಕಾನೂನನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದು ಲಕ್ಷಾಂತರ ಜನರ ಬದುಕನ್ನು ಬೆಳಗಿದವರು. ಹಾವನೂರು ವರದಿ ಜಾರಿಗೆ ತಂದು ಸಾಮಾಜಿಕ ಮತ್ತು ರಾಜಕೀಯ ಮುನ್ನೋಟವುಳ್ಳ ದಾರ್ಶನಿಕ ವ್ಯಕ್ತಿ ಎಂದು ನಿರೂಪಿಸಿದರು.

ನವಸಮಾಜದ ನಿರ್ಮಾಣಕ್ಕೆ ಶಿಕ್ಷಣವೆ ಕಾರಣ. ಪ್ರತಿಯೊಬ್ಬ ಹಿಂದುಳಿದವರ ಮಕ್ಕಳಿಗೆ ಶಿಕ್ಷಣ ನೀಡಲು ಉದ್ದೇಶಿಸಿ ಬಡವರಿಗಾಗಿ ವಸತಿ ನಿಲಯ ಒಳಗೊಂಡ ಶಾಲೆಗಳ ಸ್ಥಾಪನೆಗೆ ಅತಿ ವಿಶೇಷ ಮಹತ್ವ ಕೊಟ್ಟಿದ್ದರು. ಜೀತ ಪದ್ಧತಿ ನಿರ್ಮೂಲನೆ ಸಂಪೂರ್ಣವಾಗಿ ನಿಷೇಧ ಮಾಡಿದ ಅರಸು ದುರ್ಬಲ ವರ್ಗದ ಜನರಿಗೆ ದೊರಕಿಸಿ ಕೊಟ್ಟ ಆತ್ಮವಿಶ್ವಾಸ ಬಲ ಬಹಳ ದೊಡ್ಡದು ಎಂದು ತಿಳಿಸಿದರು.

ಏಕೀಕರಣದ ಚಳುವಳಿ ಮಹತ್ವವನ್ನು ಮನಗಂಡಿದ ಅರಸು ಅವರು ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ಮರುನಾಮಕರಣ ಮಾಡುವ ಮೂಲಕ ರಾಜ್ಯದ ಜನರ ಅಖಂಡ ಕರ್ನಾಟಕದ ಕನಸನ್ನು ನನಸು ಮಾಡಿದರು. ಅವರು ಸಮಗ್ರ ಕರ್ನಾಟಕದ ಮುನ್ನುಡಿಗೆ ಕನಸು ಕಂಡವರು. ಅವರ ಕನಸನ್ನು ನನಸು ಮಾಡುವುದು ಹೊಣೆ ನಮ್ಮ ಮೇಲಿದೆ ಅವರ ಚಿಂತನೆ ಮೌಲ್ಯ ನಮ್ಮ ದಾರಿ ದೀಪ ಎಂದು ನುಡಿದರು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಎಸ್.ಟಿ. ಸೋಮಶೇಖರ್, ವಿ.ಸೋಮಣ್ಣ, ಭೈರತಿ ಬಸವರಾಜು, ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News