ಅಬ್ದುಲ್ ಖಾದರ್
Update: 2020-08-21 23:09 IST
ಪಡುಬಿದ್ರಿ : ಹೆಜಮಾಡಿಯ ಎಸ್‍ಎಸ್ ರೋಡ್‍ನ ನಿವಾಸಿ ಎಚ್ ಅಬ್ದುಲ್ ಖಾದರ್ (70) ಶುಕ್ರವಾರ ಹೃದಯಾಘಾತದಿಂದ ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು.
ಇವರು ಹೆಜಮಾಡಿ ಮಂಡಲ ಪಂಚಾಯಿತಿನ ಮಾಜಿ ಸದಸ್ಯರಾಗಿದ್ದು, ಕಾಂಗ್ರೆಸ್ಸಿನ ಸಕ್ರಿಯ ಕಾರ್ಯಕರ್ತರಾಗಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.