ಎರಡು ವರ್ಷಗಳಲ್ಲಿ ಕೋವಿಡ್-19 ನಿರ್ಮೂಲನೆ: ವಿಶ್ವ ಆರೋಗ್ಯ ಸಂಸ್ಥೆ ವಿಶ್ವಾಸ

Update: 2020-08-22 03:41 GMT

ಜಿನೀವಾ: ವಿಶ್ವದಲ್ಲಿ ಕೊರೋನ ವೈರಸ್ ಸಾಂಕ್ರಾಮಿಕ ಎರಡು ವರ್ಷಗಳ ಒಳಗಾಗಿ ನಿರ್ಮೂಲನೆಯಾಗಲಿದೆ ಎಂಬ ವಿಶ್ವಾಸವನ್ನು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನೋಮ್ ಗೇಬ್ರಿಯಾಸಿಸ್ ವ್ಯಕ್ತಪಡಿಸಿದ್ದಾರೆ. 1918ರಲ್ಲಿ ಇಡೀ ವಿಶ್ವವನ್ನು ಕಾಡಿದ್ದ ಸ್ಪ್ಯಾನಿಶ್ ಫ್ಲೂ ಎರಡು ವರ್ಷಗಳಲ್ಲಿ ಅಂತ್ಯವಾಗಿತ್ತು ಎಂದು ಅವರು ಹೇಳಿದ್ದಾರೆ.

ಅಧಿಕ ತಂತ್ರಜ್ಞಾನ ಮತ್ತು ಸಂಪರ್ಕದಿಂದಾಗಿ ವೈರಸ್ ಹರಡುವ ಸಾಧ್ಯತೆ ಅಧಿಕ. ಅದು ಹೆಚ್ಚು ವೇಗವಾಗಿ ಹರಡಬಲ್ಲದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ಇದನ್ನು ತಡೆಯಲು ಅಗತ್ಯವಾದ ತಂತ್ರಜ್ಞಾನ ಹಾಗೂ ಜ್ಞಾನ ಕೂಡಾ ನಮ್ಮ ಬಳಿ ಇದೆ ಎಂದು ವಿಶ್ಲೇಷಿಸಿದ್ದಾರೆ.

ವಿಶ್ವಾದ್ಯಂತ 2.28 ಕೋಟಿ ಮಂದಿಗೆ ಸೋಂಕು ತಗುಲಿದ್ದು, 7,93,382 ಮಂದಿ ಇದುವರೆಗೆ ಸೋಂಕಿಗೆ ಬಲಿಯಾಗಿದ್ದಾರೆ ಎಂದು ರಾಯ್ಟರ್ಸ್‌ ಅಂಕಿ ಅಂಶಗಳಿಂದ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News