ನಿಮಗೆ ತೀರಾ ಹಸಿವೆಯಾಗಿದ್ದರೆ ಇವುಗಳನ್ನು ಮಾತ್ರ ತಿನ್ನಬೇಡಿ!

Update: 2020-08-23 14:50 GMT

ತೀರ ಹಸಿವು ಕಾಡತೊಡಗಿದಾಗ ಏನಾಗುತ್ತದೆ? ನಿಮ್ಮ ಎದುರಿಗಿದ್ದ ಯಾವುದೇ ಖಾದ್ಯ ಅಥವಾ ಆಹಾರವನ್ನು ನೀವು ತಿನ್ನಬಹುದು. ಆದರೆ ಇಂತಹ ಸಂದರ್ಭಗಳಲ್ಲಿ ಕೆಲವು ಆಹಾರಗಳನ್ನು ಸೇವಿಸುವುದರಿಂದ ನೀವು ದೂರವಿರಬೇಕು,ಇಲ್ಲದಿದ್ದರೆ ಅವು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಹದಗೆಡಿಸುತ್ತವೆ. ಹಲವಾರು ಸಂದರ್ಭಗಳಲ್ಲಿ ನಾವು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿದ್ದಾಗ ಇಂತಹ ಹಲವು ಆಹಾರಗಳನ್ನು ಸೇವಿಸುತ್ತೇವೆ. ಇವು ಆ ಕ್ಷಣಕ್ಕೆ ನಮ್ಮ ಹಸಿವನ್ನು ಶಮನಗೊಳಿಸುತ್ತವೆ ನಿಜ,ಆದರೆ ನಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತವೆ. ಕೆಲವು ಆಹಾರಗಳನ್ನು ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಆ್ಯಸಿಡಿಟಿ ಮತ್ತು ಹೊಟ್ಟೆಯ ಸಮಸ್ಯೆಗಳು ಉಂಟಾಗುತ್ತವೆ. ತುಂಬ ಹಸಿವಿದ್ದಾಗ ಮತ್ತು ಖಾಲಿಹೊಟ್ಟೆಯಲ್ಲಿದ್ದಾಗ ಏನನ್ನು ತಿನ್ನಬಾರದು ಎನ್ನುವುದರ ಬಗ್ಗೆ ಮಾಹಿತಿಗಳು ಇಲ್ಲಿವೆ.....

ಸೀಬೆಹಣ್ಣು: ಈ ಹಣ್ಣನ್ನು ವಿವಿಧ ಸಂದರ್ಭಗಳಲ್ಲಿ ಸೇವಿಸುವುದು ವಿವಿಧ ಫಲಿತಾಂಶಗಳನ್ನು ನೀಡುತ್ತದೆ. ಅಂದರೆ ಚಳಿಗಾಲದಲ್ಲಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೀಬೆಹಣ್ಣನ್ನು ತಿಂದರೆ ಹೊಟ್ಟೆನೋವು ಕಾಡಬಹುದು. ಅದೇ ಬೇಸಿಗೆಯಲ್ಲಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ತಿಂದರೆ ಅದು ಆರೋಗ್ಯಲಾಭಗಳನ್ನು ನೀಡುತ್ತದೆ.

ಸೇಬು: ಚಳಿಗಾಲದಲ್ಲಿ ಖಾಲಿಹೊಟ್ಟೆಯಲ್ಲಿ ಬೇರೆ ಏನನ್ನೂ ತಿನ್ನದೆ ಸೇಬು ತಿನ್ನುವುದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಆದರೆ ಬೇಸಿಗೆಯಲ್ಲಿ ಖಾಲಿಹೊಟ್ಟೆಯಲ್ಲಿ ಸೇಬು ತಿನ್ನಬಹುದು.

ಚಹಾ ಅಥವಾ ಕಾಫಿ: ಖಾಲಿಹೊಟ್ಟೆಯಲ್ಲಿ ಚಹಾ ಅಥವಾ ಕಾಫಿಯನ್ನು ಸೇವಿಸಬಾರದು. ನೀವು ಬ್ರೆಡ್, ಬಿಸ್ಕಿಟ್‌ಗಳ ಜೊತೆ ಈ ಪಾನೀಯಗಳನ್ನು ಸೇವಿಸಬಹುದು. ಆದರೆ ಖಾಲಿಹೊಟ್ಟೆಯಲ್ಲಿದ್ದಾಗ ಅಥವಾ ತುಂಬ ಹಸಿವಾಗಿದ್ದಾಗ ಚಹಾ ಅಥವಾ ಕಾಫಿಯನ್ನು ಸೇವಿಸುವುದು ಹೊಟ್ಟೆಯಲ್ಲಿ ವಾಯುವಿಗೆ ಕಾರಣವಾಗುತ್ತದೆ.

ಟೊಮೆಟೊ: ಚಳಿಗಾಲದಲ್ಲಿ ಖಾಲಿಹೊಟ್ಟೆಯಲ್ಲಿ ಟೊಮೆಟೊ ತಿನ್ನಬಹುದು, ಆದರೆ ಬೇಸಿಗೆಯಲ್ಲಿ ಹೀಗೆ ಮಾಡಿದರೆ ಹೊಟ್ಟೆ ಅಥವಾ ಎದೆಯ ಕಿರಿಕಿರಿಗೆ ಕಾರಣವಾಗುತ್ತದೆ.

ಮೊಸರು: ಸೂಕ್ತ ಪ್ರಮಾಣದಲ್ಲಿ ಸೇವಿಸಿದರೆ ಮೊಸರು ಪ್ರತಿಯೊಬ್ಬರಿಗೂ ಒಳ್ಳೆಯದೇ. ಆದರೆ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಮೊಸರನ್ನು ಸೇವಿಸಬಾರದು, ಅದರಿಂದ ಆರೋಗ್ಯ ಹದಗೆಡಬಹುದು.

ಸೌತೆ: ಖಾಲಿಹೊಟ್ಟೆಯಲ್ಲಿ ಸೌತೆಯನ್ನು ತಿನ್ನುವುದು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ. ಅದು ತೂಕ ಏರಿಕೆ ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಮಸಾಲೆಭರಿತ ಆಹಾರಗಳು: ನಿಮಗೆ ತೀವ್ರ ಹಸಿವಾಗುತ್ತಿದ್ದರೆ ತಕ್ಷಣ ಮಸಾಲೆಭರಿತ ಆಹಾರವನ್ನು ಸೇವಿಸಬಾರದು. ಅದು ಪಚನ ಸಮಸ್ಯೆಗಳನ್ನುಂಟು ಮಾಡುತ್ತದೆ.

ತೀರ ಹಸಿವಾದಾಗ ತಿನ್ನಬಹುದಾದ ಆಹಾರಗಳು

ಪಪ್ಪಾಯ: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯ ಹಣ್ಣನ್ನು ಸೇವಿಸಬಹುದು, ಆದರೆ ಬ್ರೇಕ್‌ಫಾಸ್ಟ್‌ನ್ನು 45 ನಿಮಿಷಗಳ ಬಳಿವೇ ತೆಗೆದುಕೊಳ್ಳಬೇಕು. ಖಾಲಿಹೊಟ್ಟೆಯಲ್ಲಿ ಪಪ್ಪಾಯ ಸೇವನೆಯು ಶರೀರದಲ್ಲಿಯ ಹಲವಾರು ವಿಷವಸ್ತುಗಳನ್ನು ಹೊರಕ್ಕೆ ಹಾಕುತ್ತದೆ.

ನೆನೆಸಿಟ್ಟ ಬಾದಾಮು: ರಾತ್ರಿ ನೀರಿನಲ್ಲಿ ನೆನೆಸಿಟ್ಟ ಬಾದಾಮನಲ್ಲಿ ಹೇರಳ ವಿಟಾಮಿನ್‌ಗಳು ಮತ್ತು ಖನಿಜಾಂಶಗಳು ಇರುತ್ತವೆ. ಬೆಳಿಗ್ಗೆ ಅದನ್ನು ಸೇವಿಸುವುದು ದಿನವಿಡೀ ಅಗತ್ಯವಿರುವ ಪೌಷ್ಟಿಕತೆಯನ್ನು ಒದಗಿಸುತ್ತದೆ.

ಬಾಳೆಹಣ್ಣು: ಬಾಳೆಹಣ್ಣು ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಹಸಿವನ್ನು ತಗ್ಗಿಸುತ್ತದೆ. ಅದರಲ್ಲಿ ಸಮೃದ್ಧವಾಗಿರುವ ಕಬ್ಬಿಣ, ಪೊಟ್ಯಾಷಿಯಂ, ನಾರು ಮತ್ತು ಮ್ಯಾಗ್ನೀಷಿಯಂ ಶರೀರದ ಅಗತ್ಯಗಳನ್ನು ಪೂರೈಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News