ಆಯುಷ್ ಇಲಾಖೆ ಕಾರ್ಯದರ್ಶಿ ವಿರುದ್ಧ ಕ್ರಮಕ್ಕೆ ಜಿ.ಸಿ. ಚಂದ್ರಶೇಖರ್ ಆಗ್ರಹ
Update: 2020-08-23 20:11 IST
ಬೆಂಗಳೂರು, ಆ. 23: ಹಿಂದಿ ಗೊತ್ತಿಲ್ಲದಿದ್ದರೆ ಸಭೆಯಿಂದ ಹೊರ ಹೋಗುವಂತೆ ವೈದ್ಯರಿಗೆ ಸೂಚಿಸಿದ ಆಯುಷ್ ಇಲಾಖೆ ಕಾರ್ಯದರ್ಶಿ ರಾಜೇಶ್ ಕೊಟೆಚ ವರ್ತನೆಯನ್ನು ಖಂಡಿಸಿರುವ ಸಂಸದ ಜಿ.ಸಿ.ಚಂದ್ರಶೇಖರ್, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಧಾನಿಗೆ ಮನವಿ ಮಾಡಿದ್ದಾರೆ.
ಟ್ವೀಟ್ ಮೂಲಕ ಪ್ರಧಾನಿಗೆ ಮನವಿ ಮಾಡಿರುವ ಜಿ.ಸಿ ಚಂದ್ರಶೇಖರ್, ಪ್ರಧಾನಿ ನರೇಂದ್ರ ಮೋದಿಯವರೆ, ಕೇಂದ್ರ ಸರಕಾರಿ ಅಧಿಕಾರಿಯೊಬ್ಬರು, ವೈದ್ಯರಿಗೆ ಹಿಂದಿ ಗೊತ್ತಿಲ್ಲದಿದ್ದರೆ ಸಭೆಯಿಂದ ಹೊರಹೋಗುವಂತೆ ಹೇಳಿರುವ ವಿಡಿಯೋದ ಬಗ್ಗೆ ಮತೊಮ್ಮೆ ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಇದು ಭಾರತದ ಏಕತೆ ಮತ್ತು ವೈವಿಧ್ಯತೆಯ ಮೇಲಿನ ನೇರ ದಾಳಿಯಾಗಿದ್ದು, ಆಯುಷ್ ಕಾರ್ಯದರ್ಶಿ ರಾಜೇಶ್ ಈ ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜೇಶ್ ಕೊಟೆಚ ಅವರ ಹಿಂದಿ ಹೇರಿಕೆ ವರ್ತನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದ ಸಂಸದ ಚಂದ್ರಶೇಖರ್, ಇಂದು ಮತ್ತೊಂದು ಟ್ವೀಟ್ ಮಾಡಿ ಪ್ರಧಾನಿಗೆ ಮನವಿ ಮಾಡಿದ್ದಾರೆ.