ಮಾದಕ ದ್ರವ್ಯ ಮಾರಾಟ: ಇಬ್ಬರು ಆರೋಪಿಗಳ ಬಂಧನ
Update: 2020-08-23 20:12 IST
ಬೆಂಗಳೂರು, ಆ. 23: ಆಷ್ ಆಯಿಲ್ ಎಂದು ಕರೆಯಲಾಗುವ ಗಾಂಜಾದಿಂದ ಬಟ್ಟಿ ಇಳಿಸಿದ ಮಾದಕ ದ್ರವ್ಯವನ್ನು ಮಾರಾಟ ಮಾಡುತ್ತಿದ್ದ ಆರೋಪದಡಿ ಇಬ್ಬರು ಇಲ್ಲಿನ ಸುದ್ದುಗುಂಟೆಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಆಂಧ್ರ ಮೂಲದ ಸುರಕತ್ತಿ ಪ್ರಭಾಕರ್, ಕೊರಳ ಕಾಮರಾಜ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಆಯಿಲ್ ಮಾಫಿಯಾದಲ್ಲಿ ಭಾಗಿಯಾಗಿದ್ದ ಮೂರನೇ ಆರೋಪಿ ದೀಪರಾಜ್ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾನೆ. ವಿಶಾಖಪಟ್ಟಣದಿಂದ ನಗರಕ್ಕೆ ಆಷ್ ಆಯಿಲ್ ತಂದು ಮಾರಾಟ ನಡೆಸುತ್ತಿದ್ದ ಆರೋಪಿಗಳಿಂದ 30 ಲಕ್ಷ ರೂ. ಮೌಲ್ಯದ 950 ಗ್ರಾಂ ಆಯಿಲ್ ಹಾಗೂ 3 ಕೆ.ಜಿ.ಗಾಂಜಾ ಜಪ್ತಿ ಮಾಡಲಾಗಿದೆ ಎಂದು ನಗರ ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಮಾಹಿತಿ ನೀಡಿದರು.