ಅದೃಷ್ಟ ಕಲ್ಲಿನ ಹೆಸರಿನಲ್ಲಿ ವಂಚನೆ ಆರೋಪ: ಮೂವರ ಬಂಧನ
Update: 2020-08-25 22:50 IST
ಬೆಂಗಳೂರು, ಆ.25: ನೈಜವಾದ ಗ್ರೀನ್ ಅವೆಂಜರ್ಸ್ ಕಲ್ಲು(ಸ್ಟೋನ್) ಎಂದು ನಂಬಿಸಿ ವಂಚನೆ ಮಾಡುತ್ತಿದ್ದ ಆರೋಪದಡಿ ಮೂವರನ್ನು ಇಲ್ಲಿನ ಬ್ಯಾಡರಹಳ್ಳಿ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ನಗರ ನಿವಾಸಿಯಾಗಿರುವ ಶ್ರೀನಿವಾಸ್, ಹರೀಶ್, ತಿರುಪತಪ್ಪ ಬಂಧಿತ ಆರೋಪಿಗಳಾಗಿದ್ದು, ಇನ್ನು ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ತಮ್ಮ ಬಳಿಯಿರುವ ಕಲ್ಲು ಮನೆಯಲ್ಲಿಟ್ಟರೆ ಅದೃಷ್ಟ ಖುಲಾಯಿಸುತ್ತೆ. ಮನೆಯಲ್ಲಿ ಹಣದ ಹೊಳೆ ಹರಿಯುತ್ತದೆ ಎಂದು ನಂಬಿಸಿ ಸಾರ್ವಜನಿಕರಿಗೆ ಮೋಸ ಮಾಡಲು ಮುಂದಾಗಿದ್ದರು ಎನ್ನಲಾಗಿದ್ದು, ಈ ಸಂಬಂಧ ಮಾಹಿತಿ ಸಂಗ್ರಹಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.