ಬಾರ್ಸಿಲೋನಾಗೆ ಗುಡ್‌ಬೈ ಹೇಳಲು ಸಜ್ಜಾದ ಫುಟ್‌ಬಾಲ್ ಮಾಂತ್ರಿಕ

Update: 2020-08-26 04:34 GMT

ಬಾರ್ಸಿಲೋನಾ (ಸ್ಪೇನ್): ಸ್ಪೇನ್‌ನ ಫುಟ್‌ಬಾಲ್ ದಿಗ್ಗಜ ಎನಿಸಿದ ಬಾರ್ಸಿಲೋನಾ ಕ್ಲಬ್ ಪರ ಎರಡು ದಶಕ ಕಾಲ ಆಡಿರುವ ಫುಟ್‌ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ ತಂಡ ತೊರೆಯಲು ಬಯಸಿರುವುದಾಗಿ ತಂಡಕ್ಕೆ ಮಾಹಿತಿ ನೀಡಿದ್ದಾರೆ.

ಅರ್ಜೆಂಟೀನಾದ ಶ್ರೇಷ್ಠ ಆಟಗಾರ ತಂಡವನ್ನು ತೊರೆಯುವ ಅಪೇಕ್ಷೆ ವ್ಯಕ್ತಪಡಿಸಿರುವುದನ್ನು ಬಾರ್ಸಿಲೋನಾ ಕ್ಲಬ್ ಕೂಡಾ ಸ್ಪಷ್ಟಪಡಿಸಿದೆ.

ಚಾಂಪಿಯನ್ಸ್ ಲೀಗ್ ಕ್ವಾರ್ಟರ್ ‌ಫೈನಲ್ ಪಂದ್ಯದಲ್ಲಿ ಬಾರ್ಸಿಲೋನಾ ತಂಡ ಬಯೆರ್ನ್ ಮ್ಯೂನಿಚ್ ಎದುರು ಹೀನಾಯವಾಗಿ 2-8 ಗೋಲುಗಳಿಂದ ಸೋಲು ಕಂಡ ಕೆಲ ದಿನಗಳಲ್ಲೇ ಮೆಸ್ಸಿ ಈ ನಿರ್ಧಾರ ಕೈಗೊಂಡಿದ್ದಾರೆ. ಈ ಮಹಾನ್ ಆಟಗಾರನ ವೃತ್ತಿಜೀವನದಲ್ಲಿ ಹಾಗೂ ಕ್ಲಬ್ ಇತಿಹಾಸದಲ್ಲೇ ಇದು ಅತ್ಯಂತ ಹೀನಾಯ ಸೋಲು ಎಂದು ವಿಶ್ಲೇಷಿಸಲಾಗಿತ್ತು.

ಈ ಸೋಲು ಬಾರ್ಸಿಲೋನಾ ಕ್ಲಬ್‌ನ ಅತ್ಯಂತ ಕಠಿಣ ಸೀಸನ್ ಆಗಿ ಪರಿವರ್ತನೆಯಾಗಲು ಕಾರಣವಾಗಿದ್ದು, 2007-08ರ ಬಳಿಕ ಇದೇ ಮೊದಲ ಬಾರಿಗೆ ಇಡೀ ವರ್ಷದಲ್ಲಿ ಯಾವ ಪ್ರಶಸ್ತಿಯನ್ನೂ ತಂಡ ಗೆದ್ದಿಲ್ಲ. ಇದು ತಂಡದಲ್ಲಿ ತೀವ್ರ ಸಂಘರ್ಷಕ್ಕೆ ಕಾರಣವಾಗಿದೆ.
ಆರು ಬಾರಿ ಬಲೋನ್ ಡಿ ಓರ್ ಪ್ರಶಸ್ತಿ ಗೆದ್ದ ಮೆಸ್ಸಿ, ವಿಶ್ವದ ಸರ್ವಶ್ರೇಷ್ಠ ಆಟಗಾರ. ತಮ್ಮ ತಂಡಕ್ಕೆ 10 ಸ್ಪೇನಿಶ್ ಲೀಗ್ ಪ್ರಶಸ್ತಿಗಳನ್ನು ಹಾಗೂ ನಾಲ್ಕು ಚಾಂಪಿಯನ್ಸ್ ಲೀಗ್ ಕಿರೀಟ ಗೆಲ್ಲಲು ತಂಡಕ್ಕೆ ನೆರವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News