×
Ad

ಎಟಿಎಂಗೆ ನುಗ್ಗಿ 28 ಲಕ್ಷ ರೂ. ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ

Update: 2020-08-26 22:16 IST

ಬೆಂಗಳೂರು, ಆ.26: ಎಟಿಎಂ ಕೇಂದ್ರಕ್ಕೆ ನುಗ್ಗಿ ಯಂತ್ರ ಕತ್ತರಿಸಿ ಕಳ್ಳತನ ಮಾಡಿ ಪರಾರಿಯಾಗಿದ್ದ ಪ್ರಕರಣದಲ್ಲಿ ಮೂವರನ್ನು ಜಾಲಹಳ್ಳಿ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಸಂಜಯ್‍ ನಗರ ಆರ್‍ಎಂವಿ 2ನೆ ಹಂತದ ಸಮರ್ಜೋತ್ ಸಿಂಗ್(33), ಎ.ವಿ.ಜಾಫರ್(30), ಅತ್ತಿಬೆಲೆಯ ಎ.ವಿ.ಯಹ್ಯಾ(27) ಎಂದು ಗುರುತಿಸಲಾಗಿದೆ. ಕಳೆದ ಆ.10ರ ತಡರಾತ್ರಿ ಜಾಲಹಳ್ಳಿ ಸಮೀಪ ಎಂಇಎಸ್ ರಸ್ತೆಯ ಕೆನರಾ ಬ್ಯಾಂಕ್‍ನ ಎಟಿಎಂ ಮಿಷನ್ ಅನ್ನು ಗ್ಯಾಸ್ ಕಟ್ಟರ್ ನಿಂದ ಕತ್ತರಿಸಿ 27,82,000 ರೂ.ಕಳ್ಳತನ ಮಾಡಲಾಗಿತ್ತು. ಎಟಿಎಂ ನಿರ್ವಹಣೆ ಮಾಡುತ್ತಿದ್ದ ಎಫ್‍ಎಸ್‍ಎಸ್ ಕಂಪೆನಿಯ ಕೆ.ಎಸ್.ಮಂಜುನಾಥ್ ದೂರು ನೀಡಿದ್ದು, ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ. 

ಬಂಧಿತ ಮೂವರು ಆರೋಪಿಗಳು ಐಶರಾಮಿ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದು, ಅವರಿಂದ ಸ್ಕೋಡಾ, ಹೊಂಡಾ ಆಕ್ಟೀವಾ ದ್ವಿಚಕ್ರ ವಾಹನ, ಒಂದು ಐ-ಫೋನ್, ಕಳ್ಳತನಕ್ಕೆ ಬಳಸಿದ್ದ ರಾಯಲ್ ಎನ್‍ಫೀಲ್ಡ್ ಬೈಕ್, ಐಶರಾಮಿ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News