ಟ್ವೆಂಟಿ-20 ಕ್ರಿಕೆಟ್: ಇತಿಹಾಸ ನಿರ್ಮಿಸಿದ ಡ್ವೆಯ್ನ್ ಬ್ರಾವೊ

Update: 2020-08-27 05:52 GMT

ಜಮೈಕಾ, ಆ.27: ಟ್ವೆಂಟಿ-20 ಮಾದರಿ ಕ್ರಿಕೆಟ್‌ನಲ್ಲಿ ವೆಸ್ಟ್‌ಇಂಡೀಸ್ ಆಲ್‌ರೌಂಡರ್ ಡ್ವೆಯ್ನ್ ಬ್ರಾವೊ 500 ವಿಕೆಟ್‌ಗಳನ್ನು ಉರುಳಿಸಿದ ಮೊದಲ ಬೌಲರ್ ಎಂಬ ಕೀರ್ತಿಗೆ ಭಾಜನರಾಗುವುದರೊಂದಿಗೆ ಇತಿಹಾಸ ನಿರ್ಮಿಸಿದರು.

ಈ ತನಕ ಯಾವ ಬೌಲರ್ ಕೂಡ ಟಿ-20 ಕ್ರಿಕೆಟ್‌ನಲ್ಲಿ ಒಟ್ಟು 400 ವಿಕೆಟ್ ಗಳಿಸಿಲ್ಲ. ಶ್ರೀಲಂಕಾದ ಲಸಿತ ಮಾಲಿಂಗ 390 ವಿಕೆಟ್ ಪಡೆದಿರುವ ಸಾಧನೆ ಮಾಡಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಬುಧವಾರ ಟ್ರಿನ್‌ಬಾಗೊ ನೈಟ್ ರೈಡರ್ಸ್ ಪರ ಆಡಿದ ಬ್ರಾವೊ ಸೈಂಟ್‌ಲೂಸಿಯಾ ಝೌಕ್ಸ್ ತಂಡದ ರಖೀಮ್ ಕಾರ್ನ್‌ವಾಲ್ ಔಟ್ ಮಾಡುವ ಮೂಲಕ 500 ವಿಕೆಟ್ ಮೈಲುಗಲ್ಲು ತಲುಪಿದರು.

ಬ್ರಾವೊ 300 ವಿಕೆಟ್(2014 ಆಗಸ್ಟ್) ಹಾಗೂ 400 ವಿಕೆಟ್(ಡಿಸೆಂಬರ್ 2017)ಪಡೆದಿರುವ ಮೊದಲ ಬೌಲರ್ ಎಂಬ ಹಿರಿಮೆಗೆ ಈಗಾಗಲೇ ಪಾತ್ರರಾಗಿದ್ದಾರೆ. ಬ್ರಾವೊ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬುಧವಾರ 100 ವಿಕೆಟ್ ಪೂರೈಸಿದರು. ಐಪಿಎಲ್‌ನಲ್ಲಿ 147 ವಿಕೆಟ್‌ಗಳನ್ನು ಪಡೆದಿದ್ದಾರೆ. ಚೆನ್ನೈ ತಂಡಕ್ಕಾಗಿಯೇೀ 118 ವಿಕೆಟ್ ಉರುಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News