ಬೆಂಗಳೂರು: ಕ್ಯಾನ್ಸರ್ ವಿರುದ್ಧ ಹೋರಾಡಿ ಚೇತರಿಸಿಕೊಳ್ಳುತ್ತಿದ್ದ ಮಗು ಕೋವಿಡ್ ಗೆ ಬಲಿ

Update: 2020-08-27 16:20 GMT

ಬೆಂಗಳೂರು, ಆ.27: ಒಂದು ವರ್ಷಗಳ ಕಾಲ ಕ್ಯಾನ್ಸರ್ ವಿರುದ್ಧ ಹೋರಾಡಿ ಚೇತರಿಸಿಕೊಳ್ಳುತ್ತಿದ್ದ 2 ವರ್ಷದ ಮಗು ಕೊರೋನ ಮಹಾಮಾರಿಗೆ ಬಲಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.

ಮೂಲತಃ ಪಶ್ಚಿಮ ಬಂಗಾಳ ಮೂಲದ ದಂಪತಿಯ ಎರಡು ವರ್ಷದ ಮಗು ಬ್ಲಡ್ ಕ್ಯಾನ್ಸರಿನಿಂದ ಬಳಲುತ್ತಿತ್ತು. 2019 ಡಿಸೆಂಬರ್ ನಲ್ಲಿ ಮಗುವನ್ನು ದಂಪತಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಕ್ಯಾನ್ಸರಿನಿಂದ ಚೇತರಿಕೆ ಕಾಣುತ್ತಿದ್ದಳು. ಇನ್ನೇನು ಬದುಕುವ ಆಸೆ ಚಿಗುರಿಕೊಂಡಾಗಲೇ ಮಗುವಿಗೆ ಕೊರೋನ ಸೋಂಕು ತಗಲಿದೆ. ಕೊರೋನ ಸೋಂಕಿನಿಂದ ಬಳಲುತ್ತಿದ್ದ ಮಗು ಕಳೆದ ಶನಿವಾರ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ.

ಪಶ್ಚಿಮ ಬಂಗಾಳ ಮೂಲದ ದಂಪತಿಯಾದ ಕಾರಣದಿಂದ ಅವರಿಗೆ ಬೆಂಗಳೂರಿನಲ್ಲಿ ಮಗುವಿನ ಅಂತ್ಯಸಂಸ್ಕಾರ ನಡೆಸುವ ಬಗ್ಗೆಯೂ ಮಾಹಿತಿ ಇರಲಿಲ್ಲ. ಈ ವೇಳೆ ದಂಪತಿಯ ನೆರವಿಗೆ ಬಂದ ಆಸ್ಪತೆಯ ಸಿಬ್ಬಂದಿ ಹಾಗೂ ಸ್ವಯಂ ಸೇವಕರಾದ ಜಮೈದ್ ರೆಹಮಾನ್, ಅಬ್ದುಲ್ ರಝಾಕ್ ತಂಡ ಮಗುವಿನ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News